ಧರ್ಮಪುರ: ಸಮೀಪದ ಹೊಸಕೆರೆ ಗ್ರಾಮದಲ್ಲಿ ಮಂಗಳವಾರ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ತವರು ಮನೆಯವರು ದೂಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಶಿಡ್ಲಹಳ್ಳಿಯ ವಿಶ್ವನಾಥ್ ಹಾಗೂ ಜಯಮ್ಮ ದಂಪತಿ ಪುತ್ರಿ ಪವಿತ್ರಾ (40) ಆತ್ಮಹತ್ಯೆ ಮಾಡಿಕೊಂಡವರು.

24 ವರ್ಷದ ಹಿಂದೆ ಹೊಸಕೆರೆ ಗ್ರಾಮದ ಈರಣ್ಣ ಎಂಬಾತನಿಗೆ ಪವಿತ್ರಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಪವಿತ್ರಾ ತವರು ಮನೆಯ ಆಸ್ತಿ ವಿಚಾರವಾಗಿ ದಂಪತಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಎರಡು ವರ್ಷದ ಹಿಂದೆ ಸಂಬಂಧಿಕರೆಲ್ಲಾ ಸೇರಿ ಪಂಚಾಯಿತಿ ಮಾಡಿ ದಂಪತಿಯನ್ನು ಒಂದುಗೂಡಿಸಿದ್ದರು.

‘ತಂದೆಯ ಮನೆಯ ಆಸ್ತಿಯಲ್ಲಿ ಪಾಲು ತರುವಂತೆ ಪತಿ, ಅತ್ತೆ, ಮೈದುನ, ನಾದಿನಿ ಹಾಗೂ ಇತರರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಮೇ 18ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ನೇಣು ಹಾಕಿಕೊಂಡಿದ್ದಾಳೆ. ಅವಳ ಸಾವಿಗೆ ಪತಿ ಈರಣ್ಣ ಹಾಗೂ ಸಂಬಂಧಿಕರೇ ಕಾರಣ’ ಎಂದು ಪವಿತ್ರಾ ತಾಯಿ ಜಯಮ್ಮ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಐ ದೇವರಾಜು ತನಿಖೆ ಕೈಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-44-2099624914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.