ಜಿಲ್ಲೆಯಲ್ಲಿ ಡೆಂಗಿ, ಚಿಕೂನ್ ಗುನ್ಯಾ ಪ್ರಕರಣ ನಿಯಂತ್ರಣ

7
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ

ಜಿಲ್ಲೆಯಲ್ಲಿ ಡೆಂಗಿ, ಚಿಕೂನ್ ಗುನ್ಯಾ ಪ್ರಕರಣ ನಿಯಂತ್ರಣ

Published:
Updated:
Deccan Herald

ತುಮಕೂರು: ‘ಈ ವರ್ಷ ಜನವರಿಯಿಂದ ಆಗಸ್ಟ್ 31ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 30 ಡೆಂಗಿ ಹಾಗೂ 40 ಚಿಕೂನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಡೆಂಗಿಯಿಂದ ಯಾವುದೇ ಸಂಶಯಾಸ್ಪದ ಅಥವಾ ದೃಢಿಕೃತ ಪ್ರಕರಣದಿಂದ ಸಾವು ಸಂಭವಿಸಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಡೆಂಗಿ ನಿಯಂತ್ರಣಕ್ಕೆ ಇಲಾಖೆಯಿಂದ ಲಾರ್ವಾ ಸಮೀಕ್ಷೆ ಮತ್ತು ಇತರೆ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಮನೆ ಹಾಗೂ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವ ದಿಶೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಮನವಿ ಮಾಡಿದರು.

ನಿರ್ದಿಷ್ಟ ಔಷಧ, ಲಸಿಕೆ ಇಲ್ಲ

‘ಡೆಂಗಿ ಜ್ವರದ ಚಿಕಿತ್ಸೆಗೆ ನಿರ್ದಿಷ್ಟ ಔಷಧಿ ಅಥವಾ ರೋಗ ನಿರೋಧಕ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣ ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

ಉತ್ಪತ್ತಿ ತಾಣಗಳು

‘ನೀರು ಶೇಖರಣೆ ತೊಟ್ಟಿ, ಬ್ಯಾರಲ್, ಬಿಸಾಕಿದ ಘನತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಟೈರ್‌, ಎಳನೀರು ಚಿಪ್ಪು ಇವು ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿದ್ದು, ಇವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ವಿಲೇವಾರಿ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ವಿ.ಮೋಹನದಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಶ್ಚಂದ್ರ, ಕೀಟತಜ್ಞೆ ಉಷಾ ಗೋಷ್ಠಿಯಲ್ಲಿದ್ದರು.

ಅಂಕಿ ಅಂಶಗಳು

* 1263 ಸಂಶಯಾಸ್ಪದ ಪ್ರಕರಣಗಳು
* 643 ರಕ್ತ ಮಾದರಿ ಪರೀಕ್ಷಿಸಿದ ಪ್ರಕರಣಗಳು
* 30 ಡೆಂಗಿ ಪ್ರಕರಣ
* 40 ಚಿಕುನ್ ಗುನ್ಯ ಪ್ರಕರಣಗಳು
ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್‌ ವರೆಗಿನ ಪ್ರಕರಣಗಳು

* ಪ್ರಕರಣಗಳು 2017 2018

* ಡೆಂಗಿ 366 30
* ಚಿಕೂನ್‌ ಗುನ್ಯಾ 213 40
* ಮಲೇರಿಯ 12 68

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !