ಮಕ್ಕಳ ಮನಸ್ಸು ಘಾಸಿಗೊಳಿಸದಿರಿ

ಭಾನುವಾರ, ಜೂಲೈ 21, 2019
28 °C

ಮಕ್ಕಳ ಮನಸ್ಸು ಘಾಸಿಗೊಳಿಸದಿರಿ

Published:
Updated:
Prajavani

ತುಮಕೂರು: ‘ಪೋಷಕರು ಮಕ್ಕಳಿಗಾಗಿ ಸಮಯ ಕೊಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ನಡೆಯಬೇಕು’ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.

ನಗರದ ಬಾಲಭವನದಲ್ಲಿ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಿದ್ಧ ಹ್ಯಾಪಿ ಪೇರೆಂಟಿಂಗ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬೆಂಗಳೂರು ಲೀಡರ್ಸ್ ಅಕಾಡೆಮಿಯ ಡಾ.ಲೋಕೇಶ್ ಮಾತನಾಡಿ, ‘ಹದಿಹರೆಯದ ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಯುವಂತೆ ಮಾಡುವಲ್ಲಿ ಪೋಷಕರ ಪಾತ್ರವೇ ಪ್ರಮುಖವಾದುದು. ಯಾವುದೇ ಆತಂಕ, ಮುಜುಗರ ಇಲ್ಲದೆ ಪೋಷಕರೊಂದಿಗೆ ಹಂಚಿಕೊಳ್ಳಬಹುದಾದ ವಾತಾವರಣವನ್ನು ಅವರಿಗೆ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.

‘ದೈನಂದಿನ ಒತ್ತಡಗಳು ಪೋಷಕರಿಗೂ ಸಾಕಷ್ಟಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯವನ್ನು ಮಕ್ಕಳೊಂದಿಗೆ ಕಳೆದರೆ ಅವರ ಜೀವನದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಕಾಣಬಹುದು’ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪಕುಮಾರ್, ‘ಇಂದಿನ ಜಗತ್ತಿನಲ್ಲಿ ಮಕ್ಕಳು ಅವರ ನಿರೀಕ್ಷಿತ ಗುರಿ ಸಾಧಿಸಬೇಕಾದರೆ ಸಮಯ ಹೊಂದಿಸುವುದನ್ನು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದನ್ನು ಕಲಿಸಬೇಕಿದೆ. ಪೋಷಕರೇ ಮಕ್ಕಳಿಗೆ ಮಾದರಿಯಾಗಬೇಕು’ ಎಂದು ತಿಳಿಸಿದರು.

ಪ್ರಾಂಶು‍ಪಾಲ ಎಸ್.ಆರ್.ಸಿದ್ದೇಶ್ವರಸ್ವಾಮಿ, ವಿಜ್ಞಾನ ವಿಭಾಗದ ಸಂಯೋಜಕ ಜಿ.ವಿ.ರಮಣರೆಡ್ಡಿ, ಕೈವಲ್ಯ ಅಕಾಡೆಮಿ ಸಂಯೋಜಕ ಗೋಪಾಲ್, ಉಪನ್ಯಾಸಕಿ ಎಂ.ಎಸ್. ಹೇಮಲತಾ ಇದ್ದರು. ಡಿ.ದಿವ್ಯಾ ಸ್ವಾಗತಿಸಿದರು. ಡಾ.ದೇವಿಪ್ರಿಯಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !