ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಲಿನ ಬೆಲೆ ಹೆಚ್ಚಳ ಬೇಡ: ಪಂಡಿತ್ ಜವಾಹರ್‌

Published : 15 ಸೆಪ್ಟೆಂಬರ್ 2024, 15:38 IST
Last Updated : 15 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ತುಮಕೂರು: ಪೆಟ್ರೋಲ್‌, ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಈಗ ಮತ್ತೆ ಹಾಲಿನ ದರ ಹೆಚ್ಚಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಜನ ಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಂಡಿತ್ ಜವಾಹರ್‌ ಹೇಳಿದ್ದಾರೆ.

‘ಉಳ್ಳವರಿಂದ ತೆರಿಗೆ, ಇತರೆ ರೂಪದಲ್ಲಿ ಹಣ ಪಡೆದು ರೈತರಿಗೆ ಸಹಾಯ ಮಾಡಬಹುದು. ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಪುನಃ ತೊಂದರೆ ಕೊಡುವುದು ಸರಿಯಲ್ಲ’ ಎಂದು ಹಾಲಿನ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

7ನೇ ವೇತನದ ಆಯೋಗದ ವರದಿಯಂತೆ ಸರ್ಕಾರಿ ನೌಕರರಿಗೆ ₹20 ಸಾವಿರ ಕೋಟಿ ಮೊತ್ತದ ಸಂಬಳ ಹೆಚ್ಚಳ ಮಾಡಲಾಗಿದೆ. ರೈತರಿಗೆ ಕೊಡಬೇಕಾದ ಹಣವನ್ನು ಸರ್ಕಾರಿ ನೌಕರರಿಂದ ಪಡೆಯಬಹುದು. ಸರ್ಕಾರಿ ನೌಕರರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಸರ್ಕಾರದ ನೀತಿ ಸಾರ್ವಜನಿಕರನ್ನು ಕಾಂಗ್ರೆಸ್‌ನಿಂದ ದೂರ ಮಾಡುತ್ತದೆ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದರ ಏರಿಕೆಯ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT