ಟಿಕೆಟ್ ದೊರೆಯದಿದ್ದರೆ ಕಾಲೆಳೆಯದಿರಿ

7
ಮಹಾನಗರ ಪಾಲಿಕೆ ಚುನಾವಣೆ: ಕಾರ್ಯಕರ್ತರ ಸಭೆಯಲ್ಲಿ ವಿ.ಸೋಮಣ್ಣ ಮನವಿ

ಟಿಕೆಟ್ ದೊರೆಯದಿದ್ದರೆ ಕಾಲೆಳೆಯದಿರಿ

Published:
Updated:
Deccan Herald

ತುಮಕೂರು: ‘ಮಹಾನಗರ ಪಾಲಿಕೆಯ 25 ವಾರ್ಡ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಹಿಡಿಯಬೇಕು’ ಎಂದು ಶಾಸಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಜೆಪಿಯ ಜಿಲ್ಲಾ ವೀಕ್ಷಕ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು’ ಎಂದರು.

‘ಟಿಕೆಟ್ ದೊರೆಯಲಿಲ್ಲ ಎಂದು ಮುಖಂಡರು ಪಕ್ಷದ ಅಧಿಕೃತ ಅಭ್ಯರ್ಥಿಯ ಕಾಲೆಳೆಯಬಾರದು. ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕು’ ಎಂದು ಹೇಳಿದರು.

ನೂರಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜಿ.ಎಸ್.ಬಸವರಾಜು, ಸುರೇಶ್ ಗೌಡ ಸೇರಿ ಏಳೆಂಟು ಮುಖಂಡರ ಸಮಿತಿ ರಚಿಸಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಸೂಚಿಸಿದರು.

‘ರಾಜ್ಯದಲ್ಲಿ ಹಾಗೂ ತುಮಕೂರು ನಗರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿದ್ದಾರೆ’ ಎಂದು ತಿಳಿಸಿದರು.

ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ‘ಎಚ್.ಡಿ.ಕುಮಾರ ಸ್ವಾಮಿ ಟೈಂಪಾಸ್ ಮುಖ್ಯಮಂತ್ರಿ ಆಗಿದ್ದಾರೆ. ಯಾವುದೇ ಕೆಲಸ ಮಾಡದೆ ಕಣ್ಣೀರಿಡುತ್ತಾರೆ. ನಾನು ಸಾಂದರ್ಭಿಕ ಶಿಶು ಎಂದು ಜನರಿಗೆ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸದೆ ಕಾಲ ವ್ಯಯಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಬಿಜೆಪಿ ಅಭಿವೃದ್ಧಿ ಪ್ರಕೋಷ್ಠದ ರಾಜ್ಯ ಸಂಚಾಲಕ ಜಿ.ಎಸ್.ಬಸವರಾಜು ಮಾತನಾಡಿ, ‘ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಲಿಲ್ಲ ಎಂದು ಹೇಳಿಕೊಳ್ಳುವುದಕ್ಕಿಂತ ಪಕ್ಷದ ಗೆಲುವು ಸಾಧಿಸಬೇಕು ಎನ್ನುವ ಭಾವನೆಯಿಂದ ಶ್ರಮಿಸಿ’ ಎಂದು ತಿಳಿಸಿದರು.

‘ಯಾವುದೇ ತಾರತಮ್ಯ ಇಲ್ಲದೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಕಾಂಕ್ಷಿಗಳು ನನಗೆ ಟಿಕೆಟ್ ನೀಡಿಲ್ಲ ಎಂದು ಮುಖಂಡರನ್ನು ದೂಷಿಸಬೇಡಿ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಅಭಿವೃದ್ಧಿ ಮನೋಭಾವ ಮತ್ತು ಸಮಾಜ ಸೇವೆಯ ಕಾಳಜಿಯುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ನುಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ನಗರದ ಘಟದ ಅಧ್ಯಕ್ಷ ರವೀಶ್, ಮುಖಂಡರಾದ ಕೃಷ್ಣಪ್ಪ, ನಾಗಣ್ಣ, ಲಕ್ಷೀಶ, ಮಲ್ಲಿಕಾರ್ಜುನ, ವಿಜಿಕುಮಾರ್, ರಮೇಶ್, ಸಂದೀಶ್, ರುದ್ರೇಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !