ಭಾನುವಾರ, ಸೆಪ್ಟೆಂಬರ್ 22, 2019
22 °C

ನಾಯಿ ದಾಳಿ; ಬಾಲಕನಿಗೆ ಗಾಯ

Published:
Updated:
Prajavani

ಕುಣಿಗಲ್: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಹೆಚ್ಚಾಗಿದೆ. ಬುಧವಾರ ಸಂಜೆ ಅಂಗಡಿಗೆಂದು ಬಂದ ಲೋಕೇಶ್ ಅವರ ಪುತ್ರ ವಿಷ್ಣು (7) ಎಂಬ ಬಾಲಕನ ಮೇಲೇರೆಗಿದ ನಾಯಿ ಕಚ್ಚಿ ಗಾಯಗೊಳಿಸಿದೆ.

ಬಾಲಕನ ತಲೆ, ಬೆನ್ನು ಮತ್ತು ಕೈಗಳಿಗೆ ತೀವ್ರಗಾಯಗಳಾಗಿವೆ. ನಾಗರಿಕರು ಬೆದರಿಸಿದ ಬಳಿಕ ನಾಯಿ ಪರಾರಿಯಾಗಿದೆ. ಪೋಷಕರು ಬಾಲಕನನ್ನು ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

‘ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಪ್ರಾಣಿ ದಯಾ ಸಂಘದವರ ಮಧ್ಯಪ್ರವೇಶದಿಂದ ಬೀದಿನಾಯಿ ಹವಾಳಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ’ ಎಂದು ಹೌಸಿಂಗ್ ಬೋರ್ಡ್ ನಿವಾಸಿ, ಉಪನ್ಯಾಸಕ ಲೋಕೇಶ್ ದೂರಿದ್ದಾರೆ.

Post Comments (+)