ನಾಯಿದಾಳಿ; ಗಾಯಗೊಂಡ ವೃದ್ಧೆ

ಶನಿವಾರ, ಏಪ್ರಿಲ್ 20, 2019
28 °C

ನಾಯಿದಾಳಿ; ಗಾಯಗೊಂಡ ವೃದ್ಧೆ

Published:
Updated:
Prajavani

ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಶ್ರಯ ಪಡೆದಿದ್ದ ವೃದ್ಧೆಯ ಮೇಲೆ ಭಾನುವಾರ ಬೆಳಗಿನ ಜಾವ ನಾಯಿಗಳು ದಾಳಿಮಾಡಿ ಕಚ್ಚಿ ಗಾಯಗೊಳಿಸಿವೆ.

ತಾಲ್ಲೂಕಿನ ಸೊಬಾಗನಹಳ್ಳಿ ನಂಜಮ್ಮ ಕಾರಣಾಂತರಗಳಿಂದ ಮನೆ ತೊರೆದಿದ್ದು, ಹಲವಾರು ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯ ವಾಹನಗಳ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು. ಭಾನುವಾರ ಬೆಳಗಿನ ಜಾವ ನಂಜಮ್ಮನ ಮೇಲೆ ನಾಯಿಗಳು ದಾಳಿ ಮಾಡಿ ಕಚ್ಚಿವೆ. ವೃದ್ಧೆ ಚೀರಾಡುತ್ತಿದ್ದುದನ್ನು ಕಂಡ ಸಮೀಪದ ಚಹ ಅಂಗಡಿ ಮಾಲೀಕ ವೃದ್ಧೆಯನ್ನು ರಕ್ಷಿಸಿದ್ದಾರೆ. ನಂತರ ದಲಿತ ಮುಖಂಡ ದಲಿತ್ ನಾರಾಯಣ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಸಂಬಂಧಿಗಳಿಗೆ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !