ಕುರಿಗಾಹಿ ಸಿದ್ಧಲಿಂಗಪ್ಪ ಕುರಿ ಮೇಯಿಸಲು ಹೋಗುವಾಗ ಸುಮಾರು 20 ಮರಿಗಳನ್ನು ಹಟ್ಟಿಯಲ್ಲಿ ಕೂಡಿಹಾಕಿ ಹೋಗಿದ್ದರು. ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ನಾಯಿಗಳು ದಾಳಿ ನಡೆಸಿವೆ. ಎರಡು ಕುರಿಮರಿಗಳ ದೇಹವನ್ನು ಕಿತ್ತು ತಿಂದಿವೆ. ಐದು ಮರಿಗಳು ನಾಯಿಗಳಿಂದ ತಪ್ಪಿಸಿಕೊಂಡಿವೆ. ಘಟನೆಯಿಂದ ಸುಮಾರು ₹60 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.