ಕುಣಿಗಲ್: ಅರಸರ ಪಾಳ್ಯ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕಿ ಸಾವು

7

ಕುಣಿಗಲ್: ಅರಸರ ಪಾಳ್ಯ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕಿ ಸಾವು

Published:
Updated:

ಕುಣಿಗಲ್: ಪಟ್ಟಣದ ಹೊರ ವಲಯದ ಅರಸರ ಪಾಳ್ಯ ಗ್ರಾಮದ ದೊಡ್ಡಕೆರೆ ಹಿನ್ನೀರು ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಗೆ ತೇಜಸ್ವಿನಿ (10) ಎಂಬ ಬಾಲಕಿ ಮೃತಪಟ್ಟಿದ್ದಾಳೆ.

ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಬೆಳಿಗ್ಗೆ 10ರ ಹೊತ್ತಿಗೆ ತಾಯಿ ಗಂಗಮ್ಮ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಅವರೊಂದಿಗೆ ತೆರಳಿದ್ದಳು.

ಕೆರೆಯಲ್ಲಿ ತಾಯಿ ಬಟ್ಟೆ ತೊಳೆಯುತ್ತಿದ್ದಾಗ ತೇಜಸ್ವಿನಿ ಕೆರೆ ದಂಡೆಯಲ್ಲಿ ಅಣಬೆ ಕೀಳುತ್ತಿದ್ದಳಂತೆ. ಬಟ್ಟೆ ತೊಳೆದುಕೊಂಡ ಬಳಿಕ ಮಗಳು ಹಿಂದೆಯೇ ಬರುತ್ತಾಳೆ ಎಂದುಕೊಂಡು ತಾಯಿ ಮನೆಗೆ ಮರಳಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ಮಗಳು ಬರದೆ ಇದ್ದಾಗ ಬಾಲಕಿ ತಂದೆ ಗಂಗಾಧರಯ್ಯ ಕೆರೆಯ ಹತ್ತಿರ ಹೋಗಿ ಹುಡುಕಾಟ ನಡೆಸಿದಾಗ ಬಾಲಕಿ ನಾಯಿ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡಿರುವುದು ಗೊತ್ತಾಗಿದೆ. 

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಬಾಲಕಿ ಕುಣಿಗಲ್‌ ಪಟ್ಟಣದ ಸೇಂಟ್‌ ರಿಟಾ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.


ನಾಯಿ ದಾಳಿಗೆ ಮೃತಪ್ಟಟ ಬಾಲಕಿ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !