ಶುಕ್ರವಾರ, ಅಕ್ಟೋಬರ್ 18, 2019
27 °C

ಕುಣಿಗಲ್: ನಾಯಿ ದಾಳಿ, ಬಾಲಕಿಗೆ ತೀವ್ರಗಾಯ

Published:
Updated:
Prajavani

ಕುಣಿಗಲ್: ಪಟ್ಟಣದ ಅಂದಾನಯ್ಯ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಾಯಿ ಕಚ್ಚಿ ಎರಡು ವರ್ಷದ ಬಾಲಕಿ ರವಿ ಎಂಬುವವರ ಮಗಳು ಶುಭಾ ತೀವ್ರವಾಗಿ ಗಾಯಗೊಂಡಿದ್ದಾಳೆ.

ರಾತ್ರಿ ಎಂಟುವರೆ ಸಮಯದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ತನ್ನ ಅಕ್ಕನ ಬಳಿಗೆ ಹೋಗುವಾಗ ಬೀದಿ ನಾಯಿ ದಾಳಿ ಮಾಡಿದ್ದು, ತಲೆ, ಕೆನ್ನೆ ಮತ್ತು ಕಿವಿಗಳಿಗೆ ಕಚ್ಚಿ ತೀವ್ರಗಾಯಗೊಳಿಸಿದೆ.

ಗಾಯಗೊಂಡಿದ್ದ ಮಗುವಿಗೆ ಎಂ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗಿದೆ.

ನಾಯಿ ಮರಿಗಳನ್ನು ಹಾಕಿದ್ದು, ಮರಿಗಳ ಹತ್ತಿರ ಹೋದ ಬಾಲಕಿಯನ್ನು ಕಚ್ಚಿ ಗಾಯಗೊಳಿಸಿದೆ, ಶುಕ್ರವಾರ ಬೆಳಿಗ್ಗೆಯೂ ವ್ಯಕ್ತಿಯ ಮೇಲೆ ನಾಯಿ ದಾಳಿ ಮಾಡಿದೆ ಎಂದಯ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

Post Comments (+)