ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಸರಳ ನಿಡಗಲ್ ಉತ್ಸವಕ್ಕೆ ಚಾಲನೆ- ಸರ್ಕಾರದಿಂದ ಆಚರಿಸಲು ಸ್ವಾಮೀಜಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಸರ್ಕಾರದಿಂದ ನಿಡಗಲ್ ಉತ್ಸವ ಆಚರಿಸಲು ಆದೇಶ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಅಧ್ಯಕ್ಷ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮನವಿ ಮಾಡಿದರು.

ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಶ್ರಾವಣ ಸೋಮವಾರದ ಪ್ರಯುಕ್ತ ನಡೆದ ನಿಡಗಲ್ ಉತ್ಸವಕ್ಕೆ ಅವರು ಮಾತನಾಡಿದರು.

ನಿಡಗಲ್ ದುರ್ಗ ಕಲೆ, ಸಾಹಿತ್ಯ, ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇಂತಹ ಐತಿಹಾಸಿಕ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿ ಘೋಷಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು.

ಸಂಘ, ಸಂಸ್ಥೆಗಳು ಪ್ರತಿವರ್ಷ ನಿಡಗಲ್ ಉತ್ಸವ ನಡೆಸುತ್ತಿರುವುದು ಶ್ಲಾಘನೀಯ. ಹಲವು ವರ್ಷಗಳಿಂದ ಸರ್ಕಾರಕ್ಕೆ ಉತ್ಸವ ನಡೆಸಲು ಆದೇಶ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ, ನಿಡಗಲ್ಲು ಹೋಬಳಿ ಘಟಕದ ಅಧ್ಯಕ್ಷ ಓಂಕಾರ ನಾಯಕ ಮಾತನಾಡಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅನಿಲ್ ಕುಮಾರ್, ದೀಪು ರಾಘವೇಂದ್ರ, ನಾಗೇಂದ್ರ ಕುಮಾರ್, ವಿಜಿ ಪಾಳೆಗಾರ, ಕೆ.ಟಿ. ಹಳ್ಳಿ ನಾಗರಾಜು, ಡಾ.ಕಿರಣ್, ಮಾನಂ ಶಶಿಕಿರಣ್, ಮಂಜುನಾಥ್, ಲಿಂಗಪ್ಪ, ಎಸ್.ಆರ್. ಪಾಳ್ಯದ ಹನುಮಂತರಾಯಪ್ಪ ಅವರನ್ನು ಅಭಿನಂದಿಸಲಾಯಿತು.

ಭಕ್ತಾದಿಗಳು ನಿಡಗಲ್ ದುರ್ಗದ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು. ರಾಮತೀರ್ಥದಲ್ಲಿ ಗಂಗಾಪೂಜೆ ನೆರವೇರಿಸಿದರು. ಯುವಜನತೆ ನಿಡಗಲ್ ಬೆಟ್ಟ ಹತ್ತಿ ಹರಿಕೆ ತೀರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು