ಅನ್ನದಾನದಷ್ಟೇ ವಿದ್ಯಾದಾನವೂ ಶ್ರೇಷ್ಠ

7
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ಧ ಪ್ರತಿಭಾ ಪುರಸ್ಕಾರ, ಕೆಂಪೇಗೌಡರ ಜಯಂತಿಯಲ್ಲಿ ಮಂಗಳಾನಂದನಾಥ ಸ್ವಾಮೀಜಿ ನುಡಿ

ಅನ್ನದಾನದಷ್ಟೇ ವಿದ್ಯಾದಾನವೂ ಶ್ರೇಷ್ಠ

Published:
Updated:
Deccan Herald

ತುಮಕೂರು: ‘ಅನ್ನದಾನದಷ್ಟೇ ವಿದ್ಯಾದಾನವೂ ಶ್ರೇಷ್ಠ. ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ ನುಡಿದರು.

ಭಾನುವಾರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಕೆಂಪೇಗೌಡರ ಜಯಂತಿ ಹಾಗೂ ಸದಸ್ಯರ ಮಹಾಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಪೋಷಕರ ನಡವಳಿಕೆಯನ್ನೇ ಮಕ್ಕಳು ಅನುಕರಿಸುವರು. ಪ್ರೀತಿ, ವಾತ್ಸಲ್ಯದ ಜೊತೆಗೆ ನಡವಳಿಕೆ ಕಲಿಸಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೇ ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಹೊಂದಿರಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿ ಸಾಧನೆಗೆ ಸತತ ಪ್ರಯತ್ನ ನಡೆಸಬೇಕು ಎಂದು ನುಡಿದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ’ಒಕ್ಕಲಿಗ ಸಮಾಜ ಇನ್ನಷ್ಟು ಸಂಘಟನೆಯಾಗಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ ಒದಗಿಸಬೇಕು. ಶಿಕ್ಷಣದಿಂದ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದರು.

ಸಾನ್ನಿಧ್ಯವಹಿಸಿದ್ದ ನಂಜಾವಧೂತ ಸ್ವಾಮೀಜಿ ಮಾತನಾಡಿ,‘ ‘ಒಕ್ಕಲಿಗ ಸಮುದಾಯ ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಬೇಕು. ಸಮಾಜ ಸಂಘಟನೆಯಲ್ಲಿ ಒಗ್ಗಟ್ಟು ಮೆರೆಯಬೇಕು. ಪ್ರತಿಭಾನ್ವಿತ ಮಕ್ಕಳ ಏಳ್ಗೆಗೆ ಪ್ರೋತ್ಸಾಹಿಸಬೇಕು’ ಎಂದರು.

‘ಸಮಾಜದ ಅಭಿವೃದ್ಧಿಯಲ್ಲಿ ಪರಸ್ಪರ ಕೈಜೋಡಿಸಬೇಕು. ಬರೀ ನಮ್ಮ ಸಮಾಜಕ್ಕಷ್ಟೇ ಅಲ್ಲದೇ ಬೇರೆ ಸಮುದಾಯದವರಿಗೂ ಅನುಕೂಲವಾಗುವ ಕಾರ್ಯಗಳನ್ನು ಮಾಡಬೇಕು. ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳು ಒಕ್ಕೂಟ ಸ್ವರೂಪವಾಗಿ ಕೆಲಸ ಮಾಡಬೇಕಾಗಿದೆ. ಸಮುದಾಯಭವನಗಳ ಅಗತ್ಯ ಇದ್ದು, ಇವುಗಳ ನಿರ್ಮಾಣದತ್ತ ಗಮನಹರಿಸಬೇಕು’ ಎಂದು ತಿಳಿಸಿದರು.

ಶಾಸಕರಾದ ಡಿ.ಸಿ.ಗೌರಿಶಂಕರ್, ಮಸಾಲ ಜಯರಾಮ್, ಮಾಜಿ ಶಾಸಕ ಎಚ್.ನಿಂಗಪ್ಪ, ಹಾಸ್ಯ ಸಾಹಿತಿ ಪ್ರೊ.ಕೃಷ್ಣೇಗೌಡ, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎಲ್.ನರೇಂದ್ರಬಾಬು, ಜೆಡಿಎಸ್ ನಗರ ಘಟಕದ ಮುಖಂಡ ಬೆಳ್ಳಿ ಲೋಕೇಶ್, ತಿಮ್ಮಪ್ಪ, ದೊಡ್ಡಲಿಂಗಪ್ಪ, ನಾಗೇಂದ್ರ, ರಂಗಸ್ವಾಮಯ್ಯ, ಬಿ.ಆರ್. ನಾಗರಾಜ್, ಬಿ.ಟಿ.ಹನುಮಂತಯ್ಯ ಇದ್ದರು.

ಸಂಘದ ಅಧ್ಯಕ್ಷ ವಿ.ವೀರನಾಗಯ್ಯ ಅಧ್ಯಕ್ಷತೆವಹಿಸಿದ್ದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಿ.ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !