ಭಾನುವಾರ, ಜುಲೈ 3, 2022
27 °C

‘ಕುಂಕುಮ ಚರ್ಚೆ ಅನಗತ್ಯ’-ಸಚಿವ ಬಿ.ಸಿ.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಲವು ಹೆಣ್ಣು ಮಕ್ಕಳು ಕುಂಕುಮ ಸಿಂಧೂರ ವಿಷಯದ ಬಗ್ಗೆ ಮಾತನಾಡಿ ಸಮಾಜದ ಸಾಮಾರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಇಲ್ಲಿ ಭಾನುವಾರ ಹೇಳಿದರು.

ಹಿಜಾಬ್‌–ಕೇಸರಿ ಶಾಲು ವಿಷಯ ಮಾತ್ರ ಚರ್ಚೆಯಲ್ಲಿತ್ತು. ಆದರೆ ಅನಗತ್ಯವಾಗಿ ಕುಂಕುಮ ಸಿಂಧೂರ ವಿಷಯವನ್ನು ವಿವಾದಕ್ಕೆ ಎಳೆದು ತರುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕದಡುವ ಕೆಲಸವನ್ನು ಇಲ್ಲಿಗೆ ನಿಲ್ಲಿಸಬೇಕು. ವಿವಾದದ ಹಿಂದೆ ಕಾಣದ ಕೈ ಅಂತೇನಿಲ್ಲ ಕಾಣುವ ಕೈ ಎಲ್ಲವನ್ನೂ ಮಾಡುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಶಾಲಾ-ಕಾಲೇಜುಗಳಿಗೆ ಸಮವಸ್ತ್ರವನ್ನು ಧರಿಸಿಕೊಂಡು ಹೋಗಬೇಕು. ಈ ಕುತಂತ್ರದ ಹಿಂದೆ ಕೆಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಏನು ಮಾತನಾಡುತ್ತಿದ್ದಾರೆಂಬ ಬಗ್ಗೆ ಅರಿವಿದೆ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು