ತಿಪಟೂರು: ಬಗರ್ ಹುಕ್ಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಅನಾವಶ್ಯಕವಾಗಿ ನೋಟಿಸ್ ನೀಡುತ್ತಿದೆ ಎಂದು ಖಂಡಿಸಿ ತಾಲ್ಲೂಕಿನ ಈರಲಗೆರೆಯಲ್ಲಿ ರೈತರ ಸಭೆ ನೆಡೆಸಿದರು.

ಸಭೆಯಲ್ಲಿ ಮಾತನಾಡಿದ ರೈತ ಸಂಘದ ತಿಮ್ಮಾಪುರದ ದೇವರಾಜ್, ‘ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿ ರೈತರ ಮುಂದಿದೆ. ಮೂರು-ನಾಲ್ಕು ತಲೆಮಾರುಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಗೆ ಸರ್ಕಾರವೇ ಮಂಜೂರಾತಿ ಪತ್ರ, ಖಾತೆ-ಪಹಣಿ ಸೇರಿದಂತೆ ಅಗತ್ಯ ದಾಖಲೆ ನೀಡಿದೆ. ಪಿತ್ರಾರ್ಜಿತವಾಗಿ ಭೂಮಿ ಹಸ್ತಾಂತರವಾಗಿರುವ ದಾಖಲೆಗಳೂ ಇವೆ. ಇಷ್ಟಾದರೂ ಅರಣ್ಯದ ನೆಪದಲ್ಲಿ ರೈತರ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ರೈತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದರು.

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಶಶಿಧರ ಮಾತನಾಡಿ, 1940ರ ಬ್ರಿಟೀಷ್ ಆಳ್ವಿಕೆ ಕಾಲದ ಆದೇಶದ ಆಧಾರದ ಮೇಲೆ ಈಗ ನೋಟಿಸ್ ನೀಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಸರ್ಕಾರಗಳು ದುಡಿಯುವ ವರ್ಗದ ವಿರುದ್ಧವೇ ವಿವಿಧ ನೀತಿಗಳನ್ನು ಜಾರಿಗೆ ತಂದಿವೆ. 1991ರ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳ ಬಳಿಕ ರೈತರ ಮೇಲಿನ ದಾಳಿಗಳು ಇನ್ನಷ್ಟು ತೀವ್ರವಾಗಿವೆ. ಈ ದಾಳಿಯನ್ನು ಸಮರ್ಥವಾಗಿ ತಡೆಯಲು ರೈತರು ಒಂದಾಗಬೇಕು. ದೆಹಲಿ ರೈತ ಹೋರಾಟ ಪ್ರೇರಣೆಯಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಭೈರನಾಯಕನಹಳ್ಳಿ, ಉಪಾಧ್ಯಕ್ಷ ಪ್ರಸನ್ನ ಕುಮಾರ್, ಚಂದ್ರಶೇಖರ್ ಹಾಲೆನಹಳ್ಳಿ, ಹರೀಶ್, ಪರಮೇಶ್, ಶಶಿಕುಮಾರ್, ಅಶೋಕ್, ಶಂಕರಣ್ಣ, ಮಹಮ್ಮದ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-66671093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.