ಚುನಾವಣೆ; ₹ 16.15 ಲಕ್ಷ ನಗದು, ₹ 95 ಲಕ್ಷ ಮದ್ಯ ವಶ

ಗುರುವಾರ , ಏಪ್ರಿಲ್ 25, 2019
21 °C

ಚುನಾವಣೆ; ₹ 16.15 ಲಕ್ಷ ನಗದು, ₹ 95 ಲಕ್ಷ ಮದ್ಯ ವಶ

Published:
Updated:

ತುಮಕೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೂ ತುಮಕೂರು ಜಿಲ್ಲೆಯಲ್ಲಿ ₹16.15 ಲಕ್ಷ ನಗದು, ₹ 95 ಲಕ್ಷ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚೆಕ್‌ ಪೋಸ್ಟ್ ಸಿಬ್ಬಂದಿ ಹಾಗೂ ಅವರ ಜೊತೆಗೆ ಎಸ್‌ಎಸ್‌ಟಿ ತಂಡಗಳ ಕಟ್ಟುನಿಟ್ಟಿನ ತಪಾಸಣೆಯಿಂದ ಜಿಲ್ಲೆಯಲ್ಲಿ ₹ 16.67 ಲಕ್ಷ ವಶಪಡಿಸಿಕೊಳ್ಳಲಾಗಿತ್ತು. ತೀವ್ರ ಪರಿಶೀಲನೆ ನಂತರ ₹ 1.47 ಲಕ್ಷ ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಉಳಿದಂತೆ ₹ 15.20 ಲಕ್ಷ ಮೊತ್ತ ಆದಾಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

‘ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು 14 ಅಬಕಾರಿ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ದಿನದ 24 ಗಂಟೆ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದಾಗಿ ತುಮಕೂರು ಜಿಲ್ಲೆಯಲ್ಲಿ 24.063  ಲೀಟರ್ ದೇಸೀ ನಿರ್ಮಿತ ಮದ್ಯ, 826 ಲೀಟರ್  ಬಿಯರ್, 126 ಲೀಟರ್ ಸೇಂದಿ ಸೇರಿದಂತೆ ಒಟ್ಟು 25 ಸಾವಿರ ಲೀಟರ್ ಮದ್ಯವನ್ನು ವಶಪಡಿಸಿಕೊಂಡು 362 ಅಬಕಾರಿ ಅಕ್ರಮ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಲಾಗಿದೆ.

ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 47 ದ್ವಿಚಕ್ರ ವಾಹನ, 1 ಭಾರಿ ವಾಹನ, ನಾಲ್ಕು 4 ಚಕ್ರದ ವಾಹನ ಸೇರಿ ₹ 44.47 ಲಕ್ಷ ಮೊತ್ತದ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !