ಬಿಜೆಪಿ ಪರ ಹಂಚಲು ತಂದಿದ್ದ ಹಣ ವಶ

ಶನಿವಾರ, ಮೇ 25, 2019
22 °C

ಬಿಜೆಪಿ ಪರ ಹಂಚಲು ತಂದಿದ್ದ ಹಣ ವಶ

Published:
Updated:

ಕೊಡಿಗೇನಹಳ್ಳಿ: ಮತದಾರರಿಗೆ ಹಂಚಲು ತಂದಿದ್ದ ₹ 5.49 ಲಕ್ಷವನ್ನು ಗಿಡ್ಡಯ್ಯನಪಾಳ್ಯದ ಸಮೀಪ ಗಸ್ತಿನಲ್ಲಿದ್ದ ಪೊಲೀಸರು ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ. 

ಪುರವರ ಹೋಬಳಿಯ ಗಿಡ್ಡಯ್ಯನಪಾಳ್ಯದ ಸಮೀಪ ಬುಧವಾರ ರಾತ್ರಿ ಬರುತಿದ್ದ ಕಾರೊಂದನ್ನು ತಡೆದು ಪೊಲೀಸರು ತಪಾಸಣೆ ನಡೆಸಿದಾಗ 500 ಮುಖಬೆಲೆಯ 11 ಕಟ್ಟುಗಳು ದೊರೆತಿವೆ.

ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ಅವರ ಒಡೆತನಕ್ಕೆ ಸೇರಿದ್ದ ಗುಬ್ಬಿ ಸಿಐಟಿ ಕಾಲೇಜಿನ ಗುಮಾಸ್ಥ ರಾಜು ಎಂಬುವವರು ಕಾರಿನಲ್ಲಿದ್ದರು. ಅವರು ಬಿಜೆಪಿ ಪರ ಬಂದಿದ್ದರು ಎಂದು ತಿಳಿದು ಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !