ಸೋಮವಾರ, ಸೆಪ್ಟೆಂಬರ್ 27, 2021
25 °C

ಕೌಶಲವಿದ್ದರೆ ಉದ್ಯೋಗ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಸ್ತುತ ಕೋವಿಡ್-19 ಜಾಗತಿಕವಾಗಿ ಕಾಡುತ್ತಿದೆ. ಯುವಜನತೆ ಉದ್ಯೋಗವಿಲ್ಲದೆ ಪರದಾಡುವಂತಹ ಸ್ಥಿತಿಯಲ್ಲಿ ಗುಣಮಟ್ಟದ ಕೌಶಲ ಹೊಂದಿದವರಿಗೆ ನಿರುದ್ಯೋಗ ಸಮಸ್ಯೆಯಾಗುವುದಿಲ್ಲ ಎಂದು ಬೆಂಗಳೂರಿನ 10ಸೆಕೆಂಡ್ಸ್ ಕಂಪನಿ ಶೈಕ್ಷಣಿಕ ಮತ್ತು ಕಾರ್ಯನಿರ್ವಹಣೆ ವಿಭಾಗದ ಮುಖ್ಯಸ್ಥ ರಾಮ್‌ಪ್ರಸಾದ್‍ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗ ನೇಮಕಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದರು.

ಕೋವಿಡ್-19 ಸೋಂಕು ಎಲ್ಲೆಡೆ ಕಾಡುತ್ತಿದ್ದರೂ ಕೌಶಲ ಹೊಂದಿರುವವರಿಗೆ ನಿರುದ್ಯೋಗ ಸಮಸ್ಯೆ ಕಾಡುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದು, ತಾಂತ್ರಿಕತೆಯ ಅರಿವು, ನೈಪುಣ್ಯತೆಯ ಅಗತ್ಯವಿದೆ ಎಂದು ಹೇಳಿದರು.

ಬೆಂಗಳೂರಿನ 7ಸೆನ್ಸ್ ಟ್ಯಾಲೆಂಟ್ ಸೆಲ್ಯೂಷನ್ ಸಂಸ್ಥೆಯ ಮಾರಾಟ ಮತ್ತು ಕಾರ್ಯನಿರ್ವಹಣೆ ವಿಭಾಗದ ಉಪಾಧ್ಯಕ್ಷ ರಾಜೀವ್ ಸ್ವಾಮಿ, ‘ವಿದ್ಯಾರ್ಥಿಗಳ ಸ್ವಪ್ರಯತ್ನದ ಜತೆಗೆ ಪೋಷಕರು, ಪ್ರಾಧ್ಯಾಪಕರ ಸಹಕಾರ ಬೇಕು. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ’ ಎಂದರು.

ಸಾಹೇ ವಿಶ್ವವಿದ್ಯಾಲಯ ಕುಲಸಚಿವ ಡಾ.ಎಂ.ಝಡ್.ಕುರಿಯನ್‍, ‘ಪ್ರತಿ ಸಣ್ಣ ವಿಷಯವೂ ದೊಡ್ಡ ಪರಿಣಾಮ ಬೀರುತ್ತದೆ. ಗಂಭೀರ ಅಧ್ಯಯನ, ಶ್ರದ್ಧೆ
ಯಿಂದ ಕೆಲಸಮಾಡಿ ಯಶಸ್ಸು ಗಳಿಸ
ಬೇಕು’ ಎಂದು ಸಲಹೆ ಮಾಡಿದರು.

ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ, ‘ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಪಡೆಯುವುದು ಸುಲಭವಲ್ಲ. ಕಾಲೇಜಿನ ಸೌಲಭ್ಯಗಳನ್ನು ಬಳಸಿಕೊಂಡು ಆತ್ಮವಿಶ್ವಾಸ, ಪರಿಶ್ರಮದಿಂದ ಉದ್ಯೋಗ ಪಡೆದುಕೊಂಡಿದ್ದಾರೆ’ ಎಂದರು.

ಸಾಹೇ ಪರೀಕ್ಷಾಂಗ ವಿಭಾಗದ ಡಾ.ಕರುಣಾಕರ್, ಕಾಲೇಜು ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ.ಅಶೋಕ್ ಮೆಹ್ತಾ, ಪ್ರೊ.ರೇಣುಕಾ ಲತಾ, ವಿದ್ಯಾರ್ಥಿಗಳ ಕಲ್ಯಾಣಾಭಿವೃದ್ಧಿ ಅಧಿಕಾರಿ ಡಾ.ವೇಣುಗೋಪಾಲ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.