ಮಂಗಳವಾರ, ಜನವರಿ 26, 2021
16 °C

ಶಾಲಾ ಮಕ್ಕಳಲ್ಲಿ ನವೋಲ್ಲಾಸ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ತಾಲ್ಲೂಕಿನಾದ್ಯಂತ ಶುಕ್ರವಾರ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂತೋಷದಿಂದ ಬಣ್ಣ- ಬಣ್ಣದ ಉಡುಗೆಗಳನ್ನು ತೊಟ್ಟು, ಮಾಸ್ಕ್ ಧರಿಸಿ ಬಂದ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ ಕೆಲ ವಿದ್ಯಾರ್ಥಿಗಳೊಂದಿಗೆ ಪೋಷಕರು ಬಂದು ಒಪ್ಪಿಗೆ ಪತ್ರ ನೀಡಿ ಶಾಲೆಯ ವಾತಾವರಣ, ಸುರಕ್ಷತೆಯನ್ನು ಗಮನಿಸಿ ಶಾಲೆಯ ಮುಖ್ಯಸ್ಥರಿಗೆ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಮತ್ತೆ ಕೆಲ ಪೋಷಕರು ಆಕ್ಷೇಪ ಪತ್ರಗಳನ್ನು ನೀಡಿದ್ದು, ಆನ್‍ಲೈನ್ ಮೂಲಕವೇ ಶಿಕ್ಷಣ ಪಡೆಯುವುದಾಗಿ ಹೇಳಿ ಹಿಂತಿರುಗಿದರು. ಹೊಸ ವರ್ಷದಂದು ಬಹಳ ದಿನಗಳ ನಂತರದಲ್ಲಿ ಒಟ್ಟಾಗಿ ಸೇರಿದ್ದ ವಿದ್ಯಾರ್ಥಿಗಳು ಪರಸ್ಪರ ಕುಶಲೋಪರಿ ವಿಚಾರಿಸುವ ಜೊತೆಗೆ ಪಠ್ಯಕ್ರಮದ ಬಗ್ಗೆ ಅಂತರ ಕಾಯ್ದುಕೊಂಡು ಚರ್ಚೆಯಲ್ಲಿ ತೊಡಗಿದ್ದರು.

ತಾಲ್ಲೂಕಿನಾದ್ಯಂತ ಎಲ್ಲ ಶಾಲೆಗಳನ್ನು ಸ್ಯಾನಿಟೈಸ್ ಮಾಡಿದ್ದು, ಬರುವ ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆಯ ಜೊತೆಗೆ ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಿ ಅಂತರವನ್ನು ಕಾಯ್ದುಕೊಳ್ಳುವಂತೆ ತರಗತಿಗಳಲ್ಲಿ ಕೂರಿಸಲಾಗಿತ್ತು. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಳಜಿವಹಿಸಿ ಪಾಠದ ಜೊತೆಗೆ ಸುರಕ್ಷತೆಯ ಬಗ್ಗೆ ತಿಳಿಸಿದರು.

ಹಲವು ಶಾಲೆಗಳನ್ನು ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಕರು ಭವ್ಯ ಸ್ವಾಗತ ಕೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.