ಚಿಕ್ಕನಾಯಕನಹಳ್ಳಿ: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿ, ಈ ವರ್ಷದ ಜುಲೈ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ನೀರು ತರುವ ಗುರಿ ಇದೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಹೇಳಿದರು.

ತಾಲ್ಲೂಕಿನ ಗೋಡೆಕೆರೆ ತಪೋವನದಲ್ಲಿ ಭಾನುವಾರ ನಡೆದ ಜಗದ್ಗುರು ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನ ಕೆರೆಗಳು ಭರ್ತಿಯಾದಲ್ಲಿ ಈ ಭಾಗದ ಜನಜೀವನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ನೀರಾವರಿ ಸೌಲಭ್ಯ ತಾಲ್ಲೂಕಿನ ಪ್ರಗತಿಗೆ ಅತಿ ಮುಖ್ಯವಾಗಿರುವುದರಿಂದ ಹೇಮಾವತಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದರು.

ಗೋಡೆಕೆರೆ ಮಠದ ಗುರು ಸಿದ್ದರಾಮೇಶ್ವರ ಗೋಪುರ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹4 ಕೋಟಿ ಬಿಡುಗಡೆ ಮಾಡಿದೆ. ಮಠದಿಂದ ಸಲ್ಲಿಕೆಯಾಗಿರುವ ಹೆಚ್ಚುವರಿ ₹5 ಕೋಟಿ ಬೇಡಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು, ಶೀಘ್ರದಲ್ಲೇ ಅನುಮೋದನೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು ದಶಕಗಳಿಂದ ಗೋಡೆಕೆರೆ ಕ್ಷೇತ್ರದಲ್ಲಿ ಚರಪಟ್ಟಾಧ್ಯಕ್ಷರಾಗಿ ಕಾಯಕವೇ ಕೈಲಾಸ ತತ್ವದಡಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಮಾತನಾಡಿ, ನುಡಿದಂತೆ ನಡೆಯುವ ವ್ಯಕ್ತಿತ್ವದ ಗೋಡೆಕೆರೆ ಸ್ವಾಮೀಜಿ ಕಾಯಕನಿಷ್ಠೆಯಿಂದಾಗಿ ಈ ಮಠಕ್ಕೆ ಅಪಾರ ಸಂಖ್ಯೆಯ ಭಕ್ತವೃಂದವಿದೆ. ದಿನದ ಪ್ರತಿ ಕ್ಷಣವನ್ನೂ ಕಾಯಕದಲ್ಲಿಯೇ ಕಳೆಯುವ ಇವರ ಜೀವನಶೈಲಿ ಎಲ್ಲರಿಗೂ ಮಾದರಿ. ಮಠಮಾನ್ಯಗಳ ಮಾರ್ಗದರ್ಶನದಲ್ಲಿ ನಡೆಯುವ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲ ಎಂದರು.

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಮಠಗಳು ಕೇವಲ ಧರ್ಮದ ಸಂಕೇತಗಳಲ್ಲ, ಅವು ದಾಸೋಹ ಮತ್ತು ಜ್ಞಾನದ ಪವಿತ್ರ ಕೇಂದ್ರಗಳಾಗಿವೆ. ಲಿಂಗಾಯತ ಸಮಾಜದ ಮಠಗಳೆಂದರೆ ದಾಸೋಹಕ್ಕೆ ಪರ್ಯಾಯ ಪದಗಳಿದ್ದಂತೆ. ಈ ಮಠಗಳ ಸಮಾಜಸೇವೆ ಇಲ್ಲದಿದ್ದರೆ ಶೋಷಿತ ವರ್ಗಗಳಿಗೆ ವಿದ್ಯೆ ಲಭಿಸುತ್ತಿರಲಿಲ್ಲ. ಶಿಕ್ಷಣ ಮತ್ತು ದಾಸೋಹದ ಮಹಾನ್ ಪರಂಪರೆಗೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ ಎಂದರು.

ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಗೋಡೆಕೆರೆ ಮಠ ಆರಂಭದಿಂದಲೂ ಅಕ್ಷರ ಜ್ಞಾನ ಮತ್ತು ದಾಸೋಹಕ್ಕೆ ಒತ್ತು ನೀಡುತ್ತ ಬಂದಿದೆ. ಇಲ್ಲಿನ ಸ್ವಾಮೀಜಿ ಮುಂಜಾನೆ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಈ ಜೀವನಶೈಲಿ ಗಮನಿಸಿದರೆ ಅವರನ್ನು ‘ಕಾಯಕಯೋಗಿ’ ಎಂದು ಕರೆಯುವುದು ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಲೋಕೇಶ್ವರ್ ಮಾತನಾಡಿ, ಬಸವಣ್ಣನ ತತ್ವಗಳನ್ನು ಎಲ್ಲೊ ಹುಡುಕುವ ಬದಲು ಸ್ವಾಮೀಜಿ ಒಡನಾಟದಲ್ಲಿ ಕೆಲವು ದಿನ ಕಳೆದರೆ ಆ ತತ್ವಗಳ ನಿಜವಾದ ಪಾಲನೆ ಕಾಣಬಹುದು. ಬಸವ ಜಯಂತಿ ಕುರಿತಾಗಿರುವ ಮೌಢ್ಯ ದೂರವಾಗಬೇಕು. ಅದು ಕೇವಲ ಜಾನುವಾರುಗಳ ಹಬ್ಬವೆಂಬ ಮಿತಿಯನ್ನು ಮೀರಿ, ಬಸವಣ್ಣನ ವೈಚಾರಿಕ ಕ್ರಾಂತಿಯ ಜಯಂತಿಯಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಮಠಾಧೀಶರು ಚಿಂತನೆ ನಡೆಸಬೇಕು ಎಂದರು.

ಮಠಾಧೀಶರು, ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-17-1985790778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.