ಮರ ಬೆಳೆಸಿದರೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ

7
ಜಿಲ್ಲಾಧಿಕಾರಿ, ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ

ಮರ ಬೆಳೆಸಿದರೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ

Published:
Updated:

ತುಮಕೂರು: ನಗರವನ್ನು ಹಸಿರುಗೊಳಿಸಲು ಮಹಾನಗರ ಪಾಲಿಕೆ ಹಸಿರೀಕರಣ ಯೋಜನೆ ಹಾಕಿಕೊಂಡಿದೆ. ಒಂದು ಮನೆ ಆವರಣದಲ್ಲಿ ಕನಿಷ್ಠ ಎರಡು ಮರಗಳನ್ನು ಬೆಳೆಸಿದರೆ ಪಾಲಿಕೆಯಿಂದ ಒಂದು ಮರಕ್ಕೆ ₹ 100ರಂತೆ 5 ವರ್ಷ ಆ ಮನೆಯ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ದೊರೆಯುತ್ತದೆ.

ಆಸಕ್ತ ನಾಗರಿಕರಿಗೆ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ ಸಸಿಗಳನ್ನು ನೀಡಲಾಗುತ್ತದೆ. ಒಬ್ಬ ಆಸ್ತಿ ತೆರಿಗೆದಾರರು ಅಥವಾ ಮನೆ ಮಾಲೀಕರು ಅವರ ಬೀದಿಯಲ್ಲಿ ಮೂರು ಸಸಿಗಳನ್ನು ಐದು ವರ್ಷ ಬೆಳೆಸುವ ಮತ್ತು ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡರೆ ಅವರಿಗೆ 5 ವರ್ಷಗಳ ನಂತರ ಜೀವಂತವಾಗಿರುವ ಪ್ರತಿ ಮರಕ್ಕೆ ₹ 100ರಂತೆ ಅವರ ಮನೆಯ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಈ ಸಸಿಗಳನ್ನು ಸ್ಮಾರ್ಟ್‌ಸಿಡಿ ಯೋಜನೆಯಡಿ ನೆಡಿಸಲಾಗುತ್ತದೆ.

ಕುಂದರನಹಳ್ಳಿ ರಮೇಶ್ ಅವರ ಅಧ್ಯಕ್ಷತೆಯ ‘ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ‘ಹಸಿರು ತುಮಕೂರು-3’ ಯೋಜನೆ ಹೆಸರಿನಲ್ಲಿ ನಗರವನ್ನು ಯಾವ ರೀತಿ ಹಸಿರುಗೊಳಿಸಬಹುದು ಎಂಬ ವರದಿಯನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ನೀಡಿತ್ತು. ಆ ವರದಿಯಲ್ಲಿನ ಅಂಶಗಳನ್ನು ಪ್ರಮುಖವಾಗಿಸಿಕೊಂಡು ಪಾಲಿಕೆ ಹಸಿರೀಕರಣ ಯೋಜನೆಯನ್ನು ಪ್ರಕಟಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !