ಬೀದಿ ಬದಿ ವ್ಯಾಪಾರಸ್ಥರಿಗೆ ಸೌಲಭ್ಯ

ತುಮಕೂರು: ಮಹಾನಗರ ಪಾಲಿಕೆಯು ಜುಲೈ 1ರಿಂದ ಆ. 15ರ ವರೆಗೆ ಆಯೋಜಿಸಿರುವ ‘ಸಂಕಲ್ಪ ಸಿದ್ದಿ’ ವಿಶೇಷ ಮೇಳದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿರುವ 2,823 ಬೀದಿ ಬದಿ ವ್ಯಾಪಾರಿಗಳು ಕಿರುಸಾಲ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 2,207 ವ್ಯಾಪಾರಿಗಳಿಗೆ ತಲಾ ₹10 ಸಾವಿರ ಸಾಲ ನೀಡಲಾಗಿದೆ. ಸಾಲ ಮಂಜೂರಾಗಿ ವಿತರಣೆಯಾಗದೆ ಉಳಿದ ಬೀದಿ ಬದಿ ವ್ಯಾಪಾರಿಗಳಿಗೆ ಈ ವಿಶೇಷ ಮೇಳದಲ್ಲಿ ಸಾಲ ವಿತರಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಈಗಾಗಲೇ ಬ್ಯಾಂಕ್‍ಗಳಿಂದ ವಾಪಾಸಾಗಿರುವ ಸಾಲದ ಅರ್ಜಿಗಳನ್ನು ಮರುಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‍ಗಳಿಗೆ ಸಲ್ಲಿಸಲು, ಹೊಸ ಅರ್ಜಿ ಸ್ವೀಕರಿಸಲು, ಕೋವಿಡ್–19 ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.