ಪಾವಗಡ: ತಾಲ್ಲೂಕಿನ ನಾಲ್ಕು ಗ್ರಾಮಗಳ 196 ಫಲಾನುಭವಿಗಳಿಗೆ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಹಕ್ಕುಪತ್ರ ವಿತರಿಸಲಾಯಿತು.
ಶಾಸಕ ವೆಂಕಟರಮಣಪ್ಪ ಮಾತ ನಾಡಿ, ‘ಹಟ್ಟಿ, ತಾಂಡಗಳು ಸೇರಿ ದಂತೆ ಕಂದಾಯ ಗ್ರಾಮಗಳನ್ನಾಗಿ ಘೋಷಿ ಸಿರುವ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸ ಲಾಗುತ್ತಿದೆ. ಕೆಲವೆಡೆ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳಲಾಗಿದೆ. ಅಂತಹ ಪ್ರದೇಶವನ್ನು ಸರ್ಕಾರದ ಹೆಸರಿಗೆ ಬದಲಾಯಿಸಿದ ನಂತರ ಹಕ್ಕುಪತ್ರ ವಿತರಿಸಲಾಗುವುದು’ ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಎನ್. ಸುಜಾತ ಮಾತನಾಡಿ, ಸರ್ಕಾರದ ಆದೇಶದಂತೆ ಬಲ್ಲೇನಹಳ್ಳಿ, ಕೆ. ರಾಂಪುರ, ಕೃಷ್ಣಗಿರಿ, ಬಂಗಾರನಾಯಕನಬೆಟ್ಟವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸ ಲಾಗಿದೆ. ಪಟ್ಟಣದ ಆಪ್ ಬಂಡೆ, ಗುಟ್ಟಹಳ್ಳಿ, ಕನುಮಲಚೆರವು ಪ್ರದೇಶದ 50 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯ ಸುದೇಶ್ ಬಾಬು, ರಾಜೇಶ್, ತೆಂಗಿನಕಾಯಿ ರವಿ, ಎಂಎಜಿ ಇಮ್ರಾನ್, ಉಪ ತಹಶೀಲ್ದಾರ್ ಎನ್. ಮೂರ್ತಿ, ಕಂದಾಯ ನಿರೀಕ್ಷಕ ರಾಜಗೋಪಾಲ್, ಶ್ರೀನಿವಾಸ್, ಕಿರಣ್, ಗ್ರಾಮ ಲೆಕ್ಕಿಗ ರಾಜೇಶ್, ಗಿರೀಶ್, ಅಂಜಾದ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.