ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹69.35 ಲಕ್ಷ ಮೌಲ್ಯದ ಚಿನ್ನ ಜಪ್ತಿ

ದುಬೈನಿಂದ ಅಕ್ರಮವಾಗಿ ಸಾಗಣೆ
Last Updated 2 ಫೆಬ್ರುವರಿ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಜ.24ರಿಂದ ಈವರೆಗೆ ಒಟ್ಟು 7 ಮಂದಿಯನ್ನು ಬಂಧಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು, ₹69.35 ಲಕ್ಷ ಮೌಲ್ಯದ 2.32 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಜ.25ರಂದು ನಗರದ ವಿಮಾನ ನಿಲ್ದಾಣಕ್ಕೆ ಶಫ್ನಾಸ್ ಮಲಯಿಲ್ ಅಬೂಬಕ್ಕರ್ (21) ಎಂಬುವರು ದುಬೈನಿಂದ ಬಂದಿದ್ದರು. ಪಾದರಸ ಲೇಪಿತ 332 ಗ್ರಾಂ ಚಿನ್ನದ ವೈರ್‌ಗಳನ್ನು ಹೊರಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಅವುಗಳ ಮೌಲ್ಯ ₹10.35 ಲಕ್ಷ ಎಂದು ಅಧಿಕಾರಿಗಳು ತಿಳಿಸಿದರು.

ಬೇರೆ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಚಿನ್ನದ ವಿವರ: ಮೇಣ ಹಾಗೂ ತಲೆಗೂದಲಿಗೆ ಬಳಸುವ ಕ್ರೀಂನಲ್ಲಿ ಇಟ್ಟುಕೊಂಡು ಚಿನ್ನ ಸಾಗಣೆಗೆ ವೆಂಕಟರಾಮನ್ ಹರಿಪ್ರಸಾದ್ (23) ಹಾಗೂ ರಾಮಚಂದ್ರ ವೆಂಕಟೇಶ್ (21) ಯತ್ನ. ಅವರಿಂದ ₹5.33 ಲಕ್ಷ ಮೌಲ್ಯದ 215 ಗ್ರಾಂ ವಶಪಡಿಸಿಕೊಳ್ಳಲಾಗಿದೆ. ಆ್ಯನೀಸ್ ಅಹ್ಮದ್ (35) ಎಂಬುವರು ಚಡ್ಡಿಯಲ್ಲಿ ಇಟ್ಟುಕೊಂಡು ಸಾಗಣೆಗೆ ಯತ್ನಿಸಿದ ₹10.76 ಲಕ್ಷ ಮೌಲ್ಯದ 344 ಗ್ರಾಂ ಹಾಗೂ ಗುದದ್ವಾರದಲ್ಲಿ ಚಿನ್ನ ಇಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಮೊಹಮ್ಮದ್ ನಸ್ರತ್ (27) ಎಂಬುವರಿಂದ ₹6.4 ಲಕ್ಷ ಮೌಲ್ಯದ 204 ಗ್ರಾಂ ವಶಕ್ಕೆ ಪಡೆಯಲಾಗಿದೆ. ಇದಲ್ಲದೇ, ಚಿನ್ನದ ವೈರ್‌ಗಳನ್ನು ಸಾಗಿಸುತ್ತಿದ್ದ ಮೊಹಮ್ಮದ್ ಮುಸ್ತಫಾ (39) ಎಂಬುವರಿಂದ ₹18.27 ಲಕ್ಷ ಮೌಲ್ಯದ 582 ಗ್ರಾಂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT