ಬುಧವಾರ, ಅಕ್ಟೋಬರ್ 16, 2019
21 °C

ಆಯುಧಪೂಜೆ, ವಿಜಯದಶಮಿ ಸಂಭ್ರಮ

Published:
Updated:
Prajavani

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಸೋಮವಾರ ಮತ್ತು ಮಂಗಳವಾರ ಆಚರಿಸಿದರು.

ಸೋಮವಾರ ಆಯುಧಪೂಜೆಯಂದು ತಮ್ಮ ವಾಹನಗಳನ್ನು ಶೃಂಗರಿಸಿಕೊಂಡು ಓಡಾಡುತ್ತಿದ್ದರು. ಉಳಿದಂತೆ ಮನೆಗಳಲ್ಲಿ ಹಿರಿಯರಿಗೆ ಎಡೆ ಹಾಕುವ ಮೂಲಕ ಹಬ್ಬ ಆಚರಿಸಲಾಯಿತು.

ಇನ್ನು ಮಂಗಳವಾರ ವಿಜಯದಶಮಿಯಂದು ಗಾಣಧಾಳು ಗ್ರಾಮದಲ್ಲಿ ಕಾರೇಹಳ್ಳಿ ರಂಗನಾಥಸ್ವಾಮಿ, ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ಹಾಗೂ ಕರಿಯಮ್ಮ ದೇವಿ ಸೇರಿದಂತೆ ವಿವಿಧ ಗ್ರಾಮಗಳ ದೇಗುಲಗಳಲ್ಲಿ ಅಂಬಿನ ಸೇವೆ ನಡೆಯಿತು.

Post Comments (+)