ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆ

ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ
Last Updated 24 ಫೆಬ್ರುವರಿ 2021, 4:20 IST
ಅಕ್ಷರ ಗಾತ್ರ

ಪಾವಗಡ: ಮುಂಜಾಗ್ರತಾ ಕ್ರಮಗಳಿಂದ ಅಗ್ನಿ ಅವಘಡ ನಿಯಂತ್ರಿಸಲು ಸಾಧ್ಯ ಎಂದು ಆಗ್ನಿಶಾಮಕ ಠಾಣೆ ಅಧಿಕಾರಿ ಚಾಂದ್ ಬಾಷ ತಿಳಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತೈಲ ಬೆಂಕಿ, ಗ್ಯಾಸ್ ಫೈರ್, ಎಲೆಕ್ಟ್ರಿಕಲ್ ಮತ್ತು ಮೆಟಲ್ ಫೈರ್ 4 ವಿಧದ ಬೆಂಕಿಯನ್ನು ಬೆಂಕಿಯ ತೀವ್ರತೆಯನ್ನು ಆಧರಿಸಿ ನಂದಿಸಬೇಕು. ನೀರಿನಿಂದ ತಣಿಸುವಿಕೆ, ಬೇರ್ಪಡಿಸುವಿಕೆ, ಮುಚ್ಚುವಿಕೆ. ಬೆಂಕಿಯನ್ನು ನಂದಿಸುವ ವಿಧಾನಗಳು. ಯಾವ ಬಗೆಯ ಬೆಂಕಿಗೆ ಯಾವುದನ್ನು ಬಳಸಬೇಕು ಎಂಬ ಮಾಹಿತಿ ಅಗತ್ಯ ಎಂದು ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರೌಢಶಾಲಾ ಮಕ್ಕಳಿಗೆ ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜು, ಪ್ರಮುಖ ಅಗ್ನಿ ಶಾಮಕ ರಾಜಣ್ಣ, ಶಿವಪ್ಪ ಅಕ್ಕಿ, ಅಗ್ನಿ ಶಾಮಕ ಡಿ.ಪಿ ಗೋಪಿ ಗುರುಪಾದಪ್ಪ ಆದಿಮನಿ, ಸಿದ್ದನಗೌಡ ಕಲ್ಲೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT