ಶುಕ್ರವಾರ, ಫೆಬ್ರವರಿ 21, 2020
25 °C

ಬಸ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರ ಸಾರಿಗೆ ಬಸ್‌ವೊಂದು ಶಿವಕುಮಾರ ಸ್ವಾಮೀಜಿ ವೃತ್ತದಿಂದ ಸಾಗುವಾಗ ಮಂಗಳವಾರ ಸಂಜೆ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೆಳಗಿಳಿಸಿ ಆಗಬಹುದಾಗಿದ್ದ ಅಪಾಯ ತಪ್ಪಿಸಿದರು.

ವಿಷಯ ತಿಳಿದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬಸ್‌ ಮುಂಭಾಗದಲ್ಲಿ ಹರಡುತ್ತಿದ್ದ ಬೆಂಕಿಯನ್ನು ನಂದಿಸಿತು.

ಈ ಕುರಿತು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎ.ಎನ್‌.ಗಜೇಂದ್ರಕುಮಾರ್‌, ಬಸ್‌ ಚಾಲಕರ ಬದಿಯಲ್ಲಿ ಇರುವ ಸ್ಟಾರ್ಟರ್‌ನಲ್ಲಿನ ಶಾರ್ಟ್‌ ಸರ್ಕೀಟ್‌ನಿಂದ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಬಸ್‌ಗೆ ಹೆಚ್ಚೇನು ಹಾನಿ ಆಗಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಬೇರೆ ಬಸ್‌ನ ವ್ಯವಸ್ಥೆ ಮಾಡಿಸಿದೆವು. ಶಾರ್ಟ್‌ ಸರ್ಕೀಟ್‌ ಆದ ಭಾಗವನ್ನು ರಿಪೇರಿ ಮಾಡಿದ್ದೇವೆ. ಬಸ್‌ ಅನ್ನು ಈಗ ಮತ್ತೆ ಓಡಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)