ತುಮಕೂರು: ನ್ಯಾಚ್ಯುರಲ್ಸ್ ಸಲೂನ್‌ಗೆ ಆಕಸ್ಮಿಕ ಬೆಂಕಿ, ₹ 3 ಲಕ್ಷ ನಷ್ಟ

7

ತುಮಕೂರು: ನ್ಯಾಚ್ಯುರಲ್ಸ್ ಸಲೂನ್‌ಗೆ ಆಕಸ್ಮಿಕ ಬೆಂಕಿ, ₹ 3 ಲಕ್ಷ ನಷ್ಟ

Published:
Updated:
Deccan Herald

ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದ ಹತ್ತಿರ ವಿಲಾಸಿ ಕಂಫರ್ಟ್ ಪಕ್ಕದ ಐಸಿಐಸಿ ಬ್ಯಾಂಕ್ ಮೇಲ್ಮಹಡಿಯಲ್ಲಿರುವ ‘ನ್ಯಾಚ್ಯುರಲ್ಸ್ ಹೇರ್ ಆ್ಯಂಡ್ ಬ್ಯೂಟಿ ಸಲೂನ್‌’ ಗೆ ಶುಕ್ರವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಸುಟ್ಟಿದೆ.

ಬೆಳಿಗ್ಗೆ 10 ಗಂಟೆ ವೇಳೆಗೆ ಸಲೂನ್ ತೆರೆದಿರಲಿಲ್ಲ. ಈ ವೇಳೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟಿದೆ. ಯಾರಿಗೂ ಇಲ್ಲದೇ ಇದ್ದುದರಿಂದ ಯಾರಿಗೂ ಅಪಾಯಗಳಾಗಿಲ್ಲ. ಆದರೆ, ಸಲೂನ್ ಸಂಪೂರ್ಣ ಸುಟ್ಟಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ ಪ್ರಜಾವಾಣಿಗೆ ತಿಳಿಸಿದರು.

ಬೆಂಕಿ ಹೊತ್ತಿಕೊಂಡು ಒಳಗಡೆ ವಸ್ತುಗಳು ಸುಟ್ಟಿದ್ದರಿಂದ ಹೊಗೆ ಹೊರಗಡೆ ಬರಲು ಆಗಿರಲಿಲ್ಲ. ಸಲೂನ್‌ ಗ್ಲಾಸ್‌ಗಳನ್ನು ಒಡೆದು ಹೊಗೆ ಹೊರಗಡೆ ಹೋಗಲು ದಾರಿ ಮಾಡಲಾಯಿತು. ಇದರಿಂದ ಅಪಾಯ ಸಂಭವಿಸಲಿಲ್ಲ ಎಂದು ಹೇಳಿದರು.

ಬೆಳಿಗ್ಗೆ 10ರಿಂದ 12ರವರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ತಿಳಿಸಿದರು.

ನ್ಯಾಚುರಲ್ ಸಲೂನ್ ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, ಇಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಅಂದಾಜು ₹ 3 ಲಕ್ಷ ಮೊತ್ತದ ವಸ್ತುಗಳು ಸುಟ್ಟಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !