ಸೋಮವಾರ, ಆಗಸ್ಟ್ 19, 2019
21 °C

ಪ್ರವಾಹ: ಸಿದ್ಧಗಂಗಾಮಠದಿಂದ ₹ 50 ಲಕ್ಷ ಪರಿಹಾರ

Published:
Updated:
Prajavani

ತುಮಕೂರು: ನೆರೆ ಸಂತ್ರಸ್ತರಿಗೆ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿಂದ ₹ 25 ಲಕ್ಷ, ಸಿದ್ಧಗಂಗಾಮಠದವತಿಯಿಂದ ₹ 25 ಲಕ್ಷ ಸೇರಿದಂತೆ  ಒಟ್ಟು ₹ 50 ಲಕ್ಷ ಮೊತ್ತ ಪರಿಹಾರ ನೀಡಲಾಗುತ್ತಿದೆ ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸಂಜೆ ಮಠದ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ಸ್ವಾಮೀಜಿ ಈ ಪರಿಹಾರ ಮೊತ್ತದ ಬಗ್ಗೆ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಎಲ್ಲ ಕಡೆ ನೆರೆಗೆ ಜನರು ತುತ್ತಾಗಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಅವರ ನೆರವಿಗೆ ಧಾವಿಸುವುದು ಎಲ್ಲರ ಕರ್ತವ್ಯವಾಗಿದೆ.  ಈ ಹಿಂದೆ 2009ರಲ್ಲೂ ಪ್ರವಾಹ ಆದಾಗ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗಿತ್ತು. ಈ ಬಾರಿಯೂ ಮಠ ನೆರವಿಗೆ ಧಾವಿಸುತ್ತಿದೆ ಎಂದು ಸಿದ್ದಲಿಂಗ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

 

Post Comments (+)