ಭಾನುವಾರ, ಸೆಪ್ಟೆಂಬರ್ 22, 2019
27 °C

ಗೌರಿ–ಗಣೇಶ ಹಬ್ಬ | ಹೂ ಪರಿಮಳದ ಹಿಂದೆ ಈ ಮಹಿಳೆಯರ ಪರಿಶ್ರಮವಿದೆ

Published:
Updated:

ತೋವಿನಕೆರೆ (ಕೊರಟಗೆರೆ): ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದ ಸುತ್ತಮುತ್ತ ಪ್ರತಿ ಹಬ್ಬವೂ ಸಡಗರ ಸಂಗತಿ. ಹೆಂಗಸರು-ಮಕ್ಕಳೆನ್ನದೆ ಎಲ್ಲರಿಗೂ ಜಾಗರಣೆ.

ಸೇವಂತಿ, ಮಲ್ಲಿಗೆ, ಕಾಕಡ ಬೆಳೆ ಈ ಪ್ರದೇಶದಲ್ಲಿ ಹೆಚ್ಚು. ಸರಿಯಾಗಿ ಹಬ್ಬದ ವೇಳೆಗೆ ಕೊಯ್ಲು ಬರುವಂತೆ ಯೋಜಿಸಿ ಗಿಡ ನೆಟ್ಟಿರುತ್ತಾರೆ. ಗಿಡಗಳಲ್ಲಿ ಹೂ ಬಿರಿದಾಗ ಅದನ್ನು ಬಿಡಿಯಾಗಿ ಮಾರುವುದಿಲ್ಲ. ಊರಿನರೆಲ್ಲರೂ ಸೇರಿ ಮಾಲೆ ಕಟ್ಟಿ ಮಾರುತ್ತಾರೆ.

ಬಿಡಿಯಾಗಿ ಮಾಡುವುದಕ್ಕಿಂತ ಹೀಗೆ ಮಾಲೆ ಕಟ್ಟಿ ಮಾರಿದರೆ ಲಾಭ ಹೆಚ್ಚು ಎಂದು ಅವರು ಅನುಭವದಿಂದ ಕಂಡು ಕೊಂಡಿದ್ದಾರೆ.

ತಾಲ್ಲೂಕಿನ ಜೋನಿಗರಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬಗಳ ವೇಳೆಗೆ ಮಾರುಕಟ್ಟೆಗೆ ಹೂ ಮಾಲೆ ತಲುಪಿಸಲು ಮಹಿಳೆಯರು ಇಡೀ ರಾತ್ರಿ ನಿದ್ದೆ ಮಾಡದೇ ಹೂವಿನ ಮಾಲೆಗಳನ್ನು ಕಟ್ಟುತ್ತಿದರು.

Post Comments (+)