ಶನಿವಾರ, ಸೆಪ್ಟೆಂಬರ್ 18, 2021
24 °C

ತುಮಕೂರು: ಜಾನುವಾರುಗಳಿಗೆ ಲಸಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಸೆ. 6ರಿಂದ 15ರ ವರೆಗೆ 4ರಿಂದ 8 ತಿಂಗಳ ಹಸು ಹಾಗೂ ಎಮ್ಮೆಗಳ ಹೆಣ್ಣು ಕರುಗಳಿಗೆ ಮೊದಲ ಸುತ್ತಿನ ಕಂದುರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಲಸಿಕೆ ಹಾಕುವ ಇಲಾಖಾ ಸಿಬ್ಬಂದಿ ಪಶುಪಾಲಕರ ಮನೆಗೆ ಭೇಟಿ ನೀಡಿ ಅರ್ಹ ಕರುಗಳಿಗೆ ಕಿವಿಯೋಲೆ ಅಳವಡಿಸಿ, ನೋಂದಾಯಿಸಿಕೊಂಡು ಲಸಿಕೆ ನೀಡಲಿದ್ದಾರೆ. ತಮ್ಮಲ್ಲಿರುವ ಹೆಣ್ಣು ಕರುಗಳಿಗೆ ತಪ್ಪದೆ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳಲ್ಲಿ ಕಂಡುಬರುವ ಕಂದುರೋಗ ನಿಯಂತ್ರಿಸಲು ಸಹರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಂದುರೋಗವು ಪ್ರಾಣಿಜನ್ಯ ವಾಗಿದ್ದು, ಅವುಗಳ ಗರ್ಭಸ್ರಾವಕ್ಕೂ ಕಾರಣವಾಗುತ್ತದೆ. ಜತೆಗೆ ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ಮನುಷ್ಯರಿಗೂ ರೋಗ ಹರಡುವ ಸಾಧ್ಯತೆ ಇದೆ. ಜನರಿಗೆ ರೋಗ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.  2022ರ ಜನವರಿಯಲ್ಲಿ 2ನೇ ಸುತ್ತು ಹಾಗೂ ಮೇನಲ್ಲಿ 3ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಮಾಂಸ ಮಾರಾಟ ನಿಷೇಧ

ತುಮಕೂರು: ಗೌರಿ, ಗಣೇಶ ಚತುರ್ಥಿ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 9ರ ಸಂಜೆ 5 ಗಂಟೆಯಿಂದ ಸೆ. 10ರ ಮಧ್ಯರಾತ್ರಿ 12 ಗಂಟೆವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಮಾಂಸ ಮಾರಾಟ ಮಳಿಗೆ ತೆರೆದು ಮಾಂಸ ಮಾರಾಟ, ಸಂಗ್ರಹ ಮಾಡುವಂತಿಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು