ಬುಧವಾರ, ಜನವರಿ 20, 2021
26 °C

ಕಟಾವಿಗೆ ಬಂದ ರಾಗಿ ಮತದಾರರಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದೆ. ಅಭ್ಯರ್ಥಿಗಳು ಗೆಲ್ಲಲು ಎಲ್ಲ ಕಸರತ್ತುಗಳನ್ನು ನಡೆಸಿದ್ದಾರೆ. ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬೆಳೆಯ ಕಟಾವು ಕಾಲವಾಗಿದ್ದರೂ ಚುನಾವಣೆಯಿಂದಾಗಿ ರೈತರು ಅದನ್ನು ನಿರ್ಲಕ್ಷಿಸಿ, ಚುನಾವಣೆಯಲ್ಲಿ ತೊಡಗಿದ್ದಾರೆ.

ವರ್ಷವಿಡಿ ಶ್ರಮವಹಿಸಿ ಬೆಳೆದ ರಾಗಿ ಬೆಳೆಯನ್ನು ಕೆಲವು ಅಭ್ಯರ್ಥಿಗಳು ಕಟಾವು ಮಾಡದೆ ಬಿಟ್ಟಿದ್ದಾರೆ. ತೆನೆಗಳು ಉದುರಿ ಬರಿ ಹುಲ್ಲು ಮಾತ್ರ ಉಳಿದಿದೆ.

ಈ ಬಗ್ಗೆ ಅಭ್ಯರ್ಥಿಯನ್ನು ಕೇಳಿದರೆ, ‘ರಾಗಿಯನ್ನು ಮುಂದಿನ ವರ್ಷವೂ ಬೆಳೆಯಬಹುದು. ಆದರೆ ಚುನಾವಣೆಗೆ ಮತ್ತೆ ಐದು ವರ್ಷ ಕಾಯಬೇಕು. ಈ ಚುನಾವಣೆಯಲ್ಲಿ ಗೆಲುವು ಅತ್ಯಂತ ಮುಖ್ಯವಾಗಿದೆ. ಮತದಾರರು ಬೆಳೆ ಕಟಾವು ಮಾಡಿಕೊಳ್ಳು
ವುದಾದರೆ ಕೊಡಲು ಸಿದ್ಧನಿದ್ದೇನೆ’ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.