ಗುರುವಾರ , ಸೆಪ್ಟೆಂಬರ್ 19, 2019
22 °C

ಹೋಟೆಲ್‌ಗೆ ನುಗ್ಗಿ ಗಲಾಟೆ: ನಾಲ್ವರ ಬಂಧನ

Published:
Updated:

ತುಮಕೂರು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆನಂದ್ ಬಿಹಾರಿ ಹೋಟೆಲ್‌ಗೆ ಶನಿವಾರ ನಡುರಾತ್ರಿ ನುಗ್ಗಿ ದಾಂಧಲೆ ಮಾಡಿದ  4 ಮಂದಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್, ರಂಗಸ್ವಾಮಿ, ರಾಜೇಶ್, ದಕ್ಷತ್‌ಗೌಡ ಬಂಧಿತರು. ಆರೋಪಿಗಳೆಲ್ಲರೂ ಕ್ಯಾತ್ಸಂದ್ರ ಸುತ್ತಮುತ್ತಲಿನ ಗ್ರಾಮದವರಾಗಿದ್ದಾರೆ ಎಂದು ಸಿಪಿಐ ಶ್ರೀಧರ್ ತಿಳಿಸಿದರು.

‘ಆರೋಪಿಗಳಲ್ಲಿ ಇನ್ನೂ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಏಕಾಏಕಿ ಹೋಟೆಲ್‌ಗೆ ನುಗ್ಗಿದ ಆರೋಪಿಗಳು ಕ್ಷುಲಕ್ಕ ಕಾರಣಕ್ಕೆ ಮಾಲೀಕರ ಜತೆ ವಾಗ್ವಾದ ನಡೆಸಿದರು. ನಂತರ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಕರವೇ ಕಾರ್ಯಕರ್ತರು ಎಂಬ ಮಾಹಿತಿ ಇದೆ’ ಎಂದು ತುಮಕೂರು ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

Post Comments (+)