ತುಮಕೂರು: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲತಾಳು ಗ್ರಾಮದಲ್ಲಿ ಭಾನುವಾರ ಸುಮಾರು ನಾಲ್ಕು ತಿಂಗಳ ಚಿರತೆ ಮರಿ ಪತ್ತೆಯಾಗಿದೆ.
ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ನಾಯಿಗಳು ಬೋಗಳುವ ಶಬ್ದ ಹೆಚ್ಚಾಗಿತ್ತು. ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಮರಿ ಕಂಡು ಬಂದಿದೆ. ಮರಿ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದರು.
ಕೊರಟಗೆರೆ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಮರಿ ವಶಕ್ಕೆ ಪಡೆದರು.