ಈ ಪಿ.ಯು. ಕಾಲೇಜಿನಲ್ಲಿ 4 ಜೋಡಿ ಅವಳಿ–ಜವಳಿ ವಿದ್ಯಾರ್ಥಿಗಳಿದ್ದಾರೆ!

7

ಈ ಪಿ.ಯು. ಕಾಲೇಜಿನಲ್ಲಿ 4 ಜೋಡಿ ಅವಳಿ–ಜವಳಿ ವಿದ್ಯಾರ್ಥಿಗಳಿದ್ದಾರೆ!

Published:
Updated:
Deccan Herald

ಕುಣಿಗಲ್: ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನಲ್ಲಿ 4 ಜೋಡಿ ಅವಳಿಜವಳಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ತಾಲ್ಲೂಕಿನ ಹೇರೂರು ಅಡಿಕೆ ವ್ಯಾಪಾರಿ ವಜೀರ್ ಖಾನ್ ಮಕ್ಕಳಾದ ಸಾದೀಯ - ಸಾನೀಯಾ, ಕೊತ್ತಗೆರೆಯ ಜಗದೀಶ್ ಅವರ ಮಕ್ಕಳಾದ ಅರುಣಾ- ವರುಣಾ, ಆಡಲಿಂಗನಪಾಳ್ಯ ಮಂಜುನಾಥ್ ಮಕ್ಕಳಾದ ಲತಾ- ಲಾವಣ್ಯ, ಚಿಕ್ಕೋನಹಳ್ಳಿ ಗ್ರಾಮದ ಸಿದ್ದಲಿಂಗಯ್ಯ ಅವರ ಮಕ್ಕಳಾದ ಕವನಾ - ಕಾವ್ಯಾ ಈ ನಾಲ್ಕು ಜೋಡಿ ಅವಳಿಜವಳಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

‘ಈ ವಿದ್ಯಾರ್ಥಿಗಳ ಜೋಡಿ ಅಪರೂಪವಾಗಿದ್ದು, ಗುರುತಿಸಲು ಉಪನ್ಯಾಸಕರು ಗೊಂದಲಕ್ಕೀಡಾಗುತ್ತಿದ್ದಾರೆ’ ಎಂದು ಉಪಪ್ರಾಂಶುಪಾಲ ಕಪನಿಪಾಳ್ಯ ರಮೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !