ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಯಿಂದ ಲಕ್ಷ ಲಪಟಾಯಿಸಿದ ವಂಚಕರು

Last Updated 7 ಏಪ್ರಿಲ್ 2020, 16:04 IST
ಅಕ್ಷರ ಗಾತ್ರ

ತುರುವೇಕೆರೆ: ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಪಟ್ಟಣದ ವಿಜಯ ಬ್ಯಾಂಕ್ ಗ್ರಾಹಕರೊಬ್ಬರಿಗೆ ಕರೆಮಾಡಿ, ಒಟಿಪಿ ಸಂಖ್ಯೆ ಪಡೆದು ಅವರ ಖಾತೆಯಲ್ಲಿದ್ದ ₹ 1,00,565 ವಂಚಕರು ಲಪಟಾಯಿಸಿದ್ದಾರೆ.

ತಾಲ್ಲೂಕಿನ ಮುತ್ತಗದಹಳ್ಳಿ ಗ್ರಾಮದ ರಾಜೇಂದ್ರಕುಮಾರ್ ಹಣ ಕಳೆದುಕೊಡ ವ್ಯಕ್ತಿ. ಇವರಿಗೆ ವಂಚಕರು ಏಪ್ರಿಲ್‌ 4ರಂದು ಕರೆ ಮಾಡಿದ್ದರು.

ನಾವು ಬ್ಯಾಂಕ್ ಅಧಿಕಾರಿಯೆಂದು ಹೇಳಿ, ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ. ಆಧಾರ್ ಲಿಂಕ್ ಆಗದಿದ್ದರೆ ನಿಮ್ಮ ಖಾತೆ ಸ್ಥಗಿತಗೊಳ್ಳಲಿದೆ. ಆದ್ದರಿಂದ ನಿಮ್ಮ ಬ್ಯಾಂಕ್ ಚಾಲನೆಯಲ್ಲಿಡಲು ಆಧಾರ್ ಲಿಂಕ್ ಸಂಬಂಧ ಒಟಿಪಿ ನಂಬರ್ ಬರುತ್ತದೆ ಅದನ್ನು ಹೇಳಿ ಎಂದು ಒತ್ತಾಯಿಸಿ ಗ್ರಾಹಕರಿಂದ ಒಟಿಪಿ ನಂಬರ್ ಪಡೆದು ಹಣ ಡ್ರಾ ಮಾಡಿಕೊಂಡಿದ್ದಾರೆ.

ಇದಾದ ಕೆಲವೇ ನಿಮಿಷದಲ್ಲಿ ನನ್ನ ಮೊಬೈಲ್‌ಗೆ ಖಾತೆಯಿಂದ ಹಣ ಡ್ರಾ ಆಗಿರುವ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಕೂಡ ವಿಚಾರಿಸಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಪಟ್ಟಣದ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT