ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು ದುಬಾರಿ; ತರಕಾರಿ ಅಗ್ಗ

ಕೊತ್ತಂಬರಿ ಸೊಪ್ಪು ಕೆ.ಜಿ ₹40: ಅಡುಗೆ ಎಣ್ಣೆ ದುಬಾರಿ: ಕೋಳಿ ಬೆಲೆ ಸ್ಥಿರ
Last Updated 28 ಮಾರ್ಚ್ 2021, 4:34 IST
ಅಕ್ಷರ ಗಾತ್ರ

ತುಮಕೂರು: ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಣ್ಣುಗಳ ಬೆಲೆ ಗಗನದತ್ತ ಮುಖಮಾಡಿದೆ. ಜೂಸ್‌ಗೆ ಹೆಚ್ಚಾಗಿ ಬಳಕೆಯಾಗುವ ಕಿತ್ತಳೆ, ಮೂಸಂಬಿ ಹಣ್ಣಿನ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಕಿತ್ತಳೆ ಕೆ.ಜಿ ₹120–130, ಮೂಸಂಬಿ ಕೆ.ಜಿ ₹70–80ಕ್ಕೆ ಏರಿಕೆಯಾಗಿದೆ.

ಕಿತ್ತಳೆ ಹಣ್ಣು ನಾಗಪುರದಿಂದ ಬರುವುದು ಕಡಿಮೆಯಾಗಿದ್ದು, ಸೀಸನ್ ಸಹ ಮುಗಿದಿದೆ. ಆವಕ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿ
ರುವುದರಿಂದ ಬೆಲೆ ದುಬಾರಿಯಾಗಿದೆ. ದ್ರಾಕ್ಷಿ ಬೆಲೆ ಕಡಿಮೆಯಾಗಿದ್ದು, ಸೀಡ್‌ಲೆಸ್ (ಹಸಿರು) ಕೆ.ಜಿ ₹60–70ಕ್ಕೆ ಕುಸಿದಿದೆ.

ತರಕಾರಿಗಳ ಬೆಲೆ ಇಳಿಕೆಯತ್ತ ಸಾಗಿದ್ದು, ಬೀನ್ಸ್ ಕೆ.ಜಿ ₹15–20ಕ್ಕೆ, ಈರುಳ್ಳಿ ಕೆ.ಜಿ ₹15–20ಕ್ಕೆ ತಗ್ಗಿದೆ. ಬೆಂಡೆಕಾಯಿ, ಬೀಟ್ರೊಟ್ ಬೆಲೆ ಕೊಂಚ ಏರಿಕೆ ಕಂಡಿದ್ದರೆ, ಉಳಿದ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ದುಬಾರಿಯಾಗಿದ್ದು, ಕೆ.ಜಿ ₹40ಕ್ಕೆ ಜಿಗಿದಿದೆ.

ಧಾನ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ. ಅಡುಗೆ ಎಣ್ಣೆ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಪ್ರತಿ ವಾರವೂ ಬೆಲೆ ಏರಿಕೆಯನ್ನು ಮುಂದುವರಿಸಿದ್ದು, ಸನ್‌ಫ್ಲವರ್ ಕೆ.ಜಿ ₹150– ₹155ಕ್ಕೆ, ಪಾಮಾಯಿಲ್ ಕೆ.ಜಿ ₹125ಕ್ಕೆ ಹೆಚ್ಚಳವಾಗಿದೆ. ಹುಣಸೆ ಹಣ್ಣು ಹೊಸದಾಗಿ ಮಾರುಕಟ್ಟೆಗೆ ಬರುತ್ತಿದ್ದು ಕೆ.ಜಿ ₹140– 160ಕ್ಕೆ ಇಳಿಕೆಯಾಗಿದೆ. ಗುಣಮಟ್ಟದ ಗಸಗಸೆ ಕೆ.ಜಿ ₹ 1,450ಕ್ಕೆ ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ್ದು, ಕೆ.ಜಿ ₹800ಕ್ಕೆ ಸಿಗುತ್ತಿದೆ.

ಕೋಳಿ ಬೆಲೆ ಸ್ಥಿರ: ಬೆಲೆ ಏರಿಕೆ ಕಂಡಿದ್ದ ಕೋಳಿ, ಎರಡು ವಾರಗಳಿಂದ ಸ್ಥಿರವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹230ಕ್ಕೆ ಹಾಗೂ ಮೊಟ್ಟೆಕೋಳಿ ಕೆ.ಜಿ ₹110ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ಮೀನು ಬೆಲೆ: ಮೀನು ಬೆಲೆಯೂ ಹೆಚ್ಚುಕಡಿಮೆ ಸ್ಥಿರವಾಗಿದೆ. ಅಂಜಲ್ ಕೆ.ಜಿ.ಗೆ ₹100 ಕಡಿಮೆಯಾಗಿದ್ದರೆ, ಬಿಳಿ ಮಾಂಜಿ ಕೆ.ಜಿ.ಗೆ ₹90 ದುಬಾರಿಯಾಗಿದೆ.

ಬಂಗುಡೆ ಕೆ.ಜಿ ₹290, ಬೂತಾಯಿ ₹250, ಬೊಳಿಂಜರ್ ₹250, ಅಂಜಲ್ ₹780, ಬಿಳಿಮಾಂಜಿ ₹940, ಕಪ್ಪುಮಾಂಜಿ ₹600, ಸೀಗಡಿ ಕೆ.ಜಿ ₹520ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT