ನಟ, ನಿರ್ದೇಶಕರ ಮನೆ ಮೇಲೆ ಐಟಿ ದಾಳಿ ಉದ್ದೇಶ ಗೊತ್ತಿಲ್ಲ: ಡಾ.ಪರಮೇಶ್ವರ

7

ನಟ, ನಿರ್ದೇಶಕರ ಮನೆ ಮೇಲೆ ಐಟಿ ದಾಳಿ ಉದ್ದೇಶ ಗೊತ್ತಿಲ್ಲ: ಡಾ.ಪರಮೇಶ್ವರ

Published:
Updated:

ತುಮಕೂರು: ಕನ್ನಡ ಚಲನಚಿತ್ರ ಕೆಲ ನಟರು, ನಿರ್ಮಾಪಕರ ಮನೆ ಮೇಲೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾವ ಉದ್ದೇಶಕ್ಕೆ ದಾಳಿ ನಡೆಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾಂಗ್ರೆಸ್ನವರು ಮತ್ತು ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ದಾಳಿಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಆದರೆ, ಈಗ ನಟ, ನಿರ್ಮಾಪಕರ ಮನೆ ಮೇಲೆ ನಡೆದಿರುವ ಐಟಿ ದಾಳಿ ಉದ್ದೇಶ ಗೊತ್ತಾಗಿಲ್ಲ’ ಎಂದರು.

‘ತೆರಿಗೆ ಕಟ್ಟಿರಲಿಲ್ಲ ಎಂಬ ಕಾರಣದಿಂದ ಕಾನೂನಾತ್ಮಕವಾಗಿ ದಾಳಿ ನಡಸಿದ್ದರೆ ಅದರಲ್ಲಿ ತಪ್ಪೇನಿಲ್ಲ. ಬೇರೆ ಉದ್ದೇಶ ಇಟ್ಟುಕೊಂಡು ದಾಳಿ ನಡೆಸಿದ್ದರೆ ಅದು ತಪ್ಪು. ಒಂದು ವರ್ಗಕ್ಕೆ ಮಾತ್ರ ಈ ರೀತಿಯ ದಾಳಿ ಸೀಮಿತವಾಗಬಾರದು’ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ಮಾತನಾಡಿದ್ದಾರೆ. ಅವರ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದರು.

ದಾಳಿ ಹಿಂದೆ ರಾಜಕೀಯ ಇಲ್ಲ: ನಟ ರಮೇಶ್ ಅರವಿಂದ್ 
‘ಯಶ್‌, ಪುನೀತ್, ಸುದೀಪ್‌, ಶಿವರಾಜ್‌ಕುಮಾರ್‌ ದೊಡ್ಡ ನಟರು ಎಂಬ ಕಾರಣಕ್ಕೆ ಐಟಿ ದಾಳಿ ಗಮನ ಸೆಳೆಯುತ್ತಿದೆ ಅಷ್ಟೇ. ಆದಾಯ ಹೆಚ್ಚಾಗಿ ಇರಬಹುದೆಂಬ ಊಹೆ‌ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇದು ಅಧಿಕಾರಿಗಳು ನಿರಂತರವಾಗಿ ನಡೆಸುವ ಪ್ರಕ್ರಿಯೆ. ಅನುಮಾನ ಬಂದಾಗ ಶೋಧನೆ ನಡೆಯುವುದು ಸಹಜ. ದಾಳಿ ನಡೆದಾಗ ಇದರಲ್ಲಿ ರಾಜಕೀಯ ಇದೆ ಎಂಬ ಆರೋಪಗಳು ಬರುತ್ತವೆ. ಆದರೆ ದಾಳಿಯ, ಹಿಂದೆ ರಾಜಕೀಯವಿದೆ ಎಂದು ನನಗೆ ಅನಿಸಿಲ್ಲ’ ಎಂದು ನಟ ರಮೇಶ್‌ ಅರವಿಂದ್‌ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !