ಆಸ್ಪತ್ರೆಯಲ್ಲೇ ಜೂಜು: ‌‌ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ

7

ಆಸ್ಪತ್ರೆಯಲ್ಲೇ ಜೂಜು: ‌‌ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ

Published:
Updated:

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೆಲಸದ  ವೇಳೆಯಲ್ಲೇ ಆಸ್ಪತ್ರೆಯಲ್ಲಿ ಜೂಜಾಟದಲ್ಲಿ ತೊಡಗಿರುವ ವಿಡಿಯೊ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. 

2.32 ನಿಮಿಷದ ವಿಡಿಯೊದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಇಸ್ಪೀಟ್ ಎಲೆ ಹಾಕುತ್ತಿರುವ ಹಾಗೂ ಆಟ ನನ್ನದು, ಸರ್ದು ಎಂದು ವಾದಿಸುವ ಧ್ವನಿ ಇದೆ. ದೃಶ್ಯದಲ್ಲಿ ಇರುವವರು ವೈದ್ಯಾಧಿಕಾರಿ ಡಾ.ಪ್ರದೀಪ್, ಶುಶ್ರೂಷಕಿ ಪುಷ್ಪಲತಾ, ಸಹಾಯಕ ನಾಗರಾಜು, ಸಹಾಯಕಿ ಮಂಜಮ್ಮ ಎನ್ನಲಾಗಿದೆ.

ರೋಗಿಯೊಬ್ಬರು ಚಿಕಿತ್ಸೆಗೆ ಬಂದಾಗ ಸಿಬ್ಬಂದಿ ಜೂಜು ಆಡುತ್ತಿರುವುದನ್ನು ಗಮನಿಸಿ ಗೋಪ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.  ವೈದ್ಯರ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !