ಸ್ವಚ್ಛತೆ ಕಾಯಕವಾಗಲಿ: ಶಾಸಕ ಜಿ.ಬಿ. ಜ್ಯೋತಿಗಣೇಶ್

7
ಗಾಂಧಿ ಜಯಂತಿ ಅಂಗವಾಗಿ ದೋಬಿಘಾಟ್‌ನಲ್ಲಿ ಸ್ವಚ್ಛತೆ ಕಾರ್ಯಕ್ರಮ

ಸ್ವಚ್ಛತೆ ಕಾಯಕವಾಗಲಿ: ಶಾಸಕ ಜಿ.ಬಿ. ಜ್ಯೋತಿಗಣೇಶ್

Published:
Updated:
Deccan Herald

ತುಮಕೂರು: ‘ಮಹಾತ್ಮ ಗಾಂಧೀಜಿ ಅವರ ಕನಸಿನ ಪರಿಕಲ್ಪನೆಯಾದ ಸ್ವಚ್ಛತೆ ಕೇವಲ ಆಚರಣೆ ಆಗಬಾರದು. ಪ್ರತಿಯೊಬ್ಬ ನಾಗರಿಕರ ಕಾಯಕದ ರೀತಿ ಮಾಡಬೇಕು’ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ನುಡಿದರು.

ನಗರದ 26ನೇ ವಾರ್ಡ್ ವ್ಯಾಪ್ತಿಯ ದೋಬಿಘಾಟ್‌ ಸ್ಮಶಾನ ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

‘ಮಹಾತ್ಮ ಗಾಂಧೀಜಿ ಅವರು ಸ್ವಚ್ಛತೆ ಕಾಪಾಡುವಂತೆ ಹೇಳಿದ್ದರು. ಇಂದು ಪ್ರಧಾನಿ ನರೇಂದ್ರಮೋದಿ ಅವರು ಸ್ವಚ್ಛ ಭಾರತ್ ಅಭಿಯಾನದ ಮೂಲಕ ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ‘ಗಾಂಧೀಜಿ ಅವರು ಎಲ್ಲ ವರ್ಗದವರು ಸ್ವತಂತ್ರರಾಗಿ ಬದುಕಬೇಕು ಎಂಬ ಕನಸು ಕಂಡಿದ್ದರು. ವಿಶೇಷವಾಗಿ ಹೆಣ್ಣು ಮಕ್ಕಳು ಸ್ವಾಭಿಮಾನವಾಗಿ, ನಿರ್ಭೀತಿಯಿಂದ ಬಾಳಬೇಕು ಎಂಬುದು ಅವರ ಪ್ರಮುಖ ಕನಸಸಾಗಿತ್ತು. ಆ ವಾತಾವರಣ ಸೃಷ್ಟಿಸಿ ಅವರ ತತ್ವಾದರ್ಶ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಾವು  ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಎಚ್. ಮಲ್ಲಿಕಾರ್ಜುನಯ್ಯ, ‘ನಗರವನ್ನು ಸ್ವಚ್ಛ, ಸುಂದರವಾಗಿಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಸೇವೆ ಮಹತ್ವವಾದುದು’ ಎಂದರು.

 ಪಾಲಿಕೆ ಸದಸ್ಯೆ ಚಂದ್ರಕಲಾ, ಮುಖಂಡರಾದ ಕೊಪ್ಪಲ್ ನಾಗರಾಜು, ಸುಜಾತಾ ಚಂದ್ರಶೇಖರ್, ರಾಣಿ ಚಂದ್ರಶೇಖರ್, ಓಂಕಾರ್, ಮಂಜುನಾಥ್, ಕಂಚಿ ರಾಮಯ್ಯ, ಸದಾಶಿವಯ್ಯ, ಕೃಷ್ಣಮೂರ್ತಿ, ಕುಮಾರಸ್ವಾಮಿ, ಶುಭಕರ ಇದ್ದರು.

ಸಮರ್ಥ ಯೂತ್ ಕ್ಲಬ್ ಸದಸ್ಯರು ರಸ್ತೆ ಸ್ವಚ್ಛಗೊಳಿಸಿ ಸ್ವಚ್ಛತೆ ಕುರಿತ ಜಾಗೃತಿ ಗೀತೆಗಳನ್ನು ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !