ಗಣೆ ಗೌರವಕ್ಕೆ ತೀ.ನಂ.ಶಂಕರನಾರಾಯಣ ಆಯ್ಕೆ

ಶುಕ್ರವಾರ, ಮಾರ್ಚ್ 22, 2019
27 °C

ಗಣೆ ಗೌರವಕ್ಕೆ ತೀ.ನಂ.ಶಂಕರನಾರಾಯಣ ಆಯ್ಕೆ

Published:
Updated:
Prajavani

ತುಮಕೂರು: ಜನಪದ ವಿದ್ವಾಂಸ ಡಾ.ತೀ.ನಂ.ಶಂಕರನಾರಾಯಣ ಅವರು ಮಾ.4ರ ಶಿವರಾತ್ರಿಯ ದಿನ ಶಿರಾ ತಾಲ್ಲೂಕಿನ ಜುಂಜಪ್ಪನಗುಡ್ಡೆಯಲ್ಲಿ ‌ನಡೆಯುವ ಶಿವೋತ್ಸವದಲ್ಲಿ ’ಗಣೆ ಗೌರವ‘ ಪಡೆಯಲಿದ್ದಾರೆ.

’ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ‘ ನೇತೃತ್ವದಲ್ಲಿ ಸುತ್ತಲಿನ ಹಳ್ಳಿಗಳ ಜನರು ಪ್ರತಿ ಶಿವರಾತ್ರಿಯಲ್ಲಿ ಶಿವೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಭಜನೆ, ಜನಪದ ಆಚರಣೆಗಳ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಜನರು ಪಾಲ್ಗೊಳ್ಳುವರು. ’ಗಣೆ ಗೌರವ‘ ಶಿವೋತ್ಸವದ ಪ್ರಮುಖ ಘಟ್ಟ.

ಡಾ.ಶಂಕರನಾರಾಯಣ ಅವರಿಗೆ ಕೊಳಲಿನ ಆದಿಮ ರೂಪವಾದ ಗಣೆ ವಾದ್ಯ, ಕರಿಯ ಕಂಬಳಿ ಹಾಗೂ ₹ 5 ಸಾವಿರ ಜೊತೆಗೆ ಮುತ್ತುಗದ ಹೂವಿನ ಪುಷ್ಪಾರ್ಚನೆಯೊಂದಿಗೆ ಗಣೆ ಗೌರವ ಪ್ರಧಾನ ಮಾಡಲಾಗುತ್ತದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದ ಶಂಕರನಾರಾಯಣ ಅವರು ಬುಡಕಟ್ಟು ಸಮುದಾಯ ಕಾಡುಗೊಲ್ಲರ ಮೌಖಿಕ ಕಥನಗಳನ್ನು ಸಂಶೋಧನೆಯ ಮೂಲಕ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಗಣೆ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !