ಸತ್ಕಾರ್ಯಗಳೇ ಮುಂದಿನ ಪೀಳಿಗೆಗೆ ಮಾದರಿ

7
ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಅಭಿಮತ

ಸತ್ಕಾರ್ಯಗಳೇ ಮುಂದಿನ ಪೀಳಿಗೆಗೆ ಮಾದರಿ

Published:
Updated:
Deccan Herald

ತಿಪಟೂರು: ‘ನಾವು ಮಾಡಿದ ಸತ್ಕಾರ್ಯಗಳೇ ನಮ್ಮ ಮುಂದಿನ ಪೀಳಿಗೆಗೆ ಮಾದರಿ. ಉತ್ತಮ ಕಾರ್ಯಗಳ ಮೂಲಕ ಸುಭದ್ರ ಭವಿಷ್ಯ ರೂಪಿಸಬೇಕು’ ಎಂದು ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯ ಪರಿವರ್ತನೆಯಾದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ. ಸ್ವಾರ್ಥಪರ ಚಿಂತನೆ ಬಿಟ್ಟು ಪರೋಪಕಾರ, ಸಹಕಾರ, ಸಹಭಾಳ್ವೆಯ ಜೀವನ ನಡೆಸಬೇಕು. ದ್ವೇಷ ಅಸೂಯೆಯಿಂದ ದೂರ ಉಳಿದರೆ ಆರೋಗ್ಯಕ್ಕೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು. ಸಹಕಾರ ಸಂಘಗಳು ಬಡವರ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಬದುಕು ರೂಪಿಸಲು ಪ್ರಯತ್ನಿಸುತ್ತಿವೆ. ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಸಂಘ ನಗದು ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಕ್ಕಳು ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ಸುಸಂಸ್ಕೃತ ನಾಗರಿಕರಾಗಬೇಕು ಎಂದು ತಿಳಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಸಹಕಾರ ಸಂಘಗಳು ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸ್ಫೂರ್ತಿದಾಯಕ ಎಂದರು.

ತಿಪಟೂರು ಮರ್ಚೆಂಟ್ ಕೋ ಅಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರು ಸಂಘದ ಏಳಿಗೆಗೆ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿ ಸಂಘದ ಗೌರವ ಹೆಚ್ಚುತ್ತದೆ ಎಂದರು.

ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಮ್ಮ ಸಂಘ ಕಷ್ಟದ ಹಾದಿಯಲ್ಲಿ ಬೆಳೆದು ಸದಸ್ಯರ ಸಹಕಾರದಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷ ಸಂಘ ₹ 10 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಎತ್ತಿನಹೊಳೆ ಯೋಜನೆಗೆ ಕರಡಿ ಕೆರೆ ಸೇರಿಸಲು ಹೋರಾಟ ನಡೆಯಬೇಕಿದೆ’ ಎಂದರು.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರೋಟರಿ ಉಪಾಧ್ಯಕ್ಷ ಟಿ.ಎಸ್. ವೆಂಕಟಾಚಲಪತಿ, ಖಜಾಂಚಿ ಅಶೋಕ್‍ಕುಮಾರ್, ಸಂಘದ ಉಪಾಧ್ಯಕ್ಷ ಕೆ.ಎಸ್. ಶಿವಮೂರ್ತಿ, ನಿರ್ದೇಶಕರಾದ ಬಸವರಾಜು, ನಂಜುಂಡಯ್ಯ, ಶಿವಲಿಂಗಮ್ಮ, ಎಲ್.ಐ.ಸಿ. ಲಿಂಗರಾಜು, ವೀರಣ್ಣ, ಜಯಣ್ಣ, ಗಂಗಾಣಮ್ಮ, ಮಲ್ಲೇಶಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಇದ್ದರು. ಧರ್ಮಾವತಿ ಸ್ವಾಗತಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !