ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಸದಸ್ಯರಿಗೆ ಪ್ರವಾಸ ಭಾಗ್ಯ

Last Updated 16 ಜನವರಿ 2021, 3:25 IST
ಅಕ್ಷರ ಗಾತ್ರ

ಪಾವಗಡ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾದ ಕೂಡಲೆ ಆಕಾಂಕ್ಷಿಗಳು ಅಧಿಕಾರಕ್ಕಾಗಿ ನಿಗದಿತ ಸಂಖ್ಯೆಯ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ ಆರಂಭಿಸಿದ್ದಾರೆ.

ಪಟ್ಟಣಕ್ಕೆ ಜಿಲ್ಲಾಧಿಕಾರಿ ಶುಕ್ರವಾರ ಭೇಟಿ ನೀಡಿ ಮೀಸಲು ನಿಗದಿಪಡಿಸಿದ ಕೂಡಲೆ, ಲೆಕ್ಕಾಚಾರಗಳು ಆರಂಭ ವಾಗಿವೆ. ಪಟ್ಟಣದ ತಾಲ್ಲೂಕು ಪಂಚಾ ಯಿತಿ ಕಚೇರಿ ಮುಂಭಾಗ ಇತರೆ ಪ್ರಮುಖ ಸ್ಥಳಗಳಲ್ಲಿ ಶುಕ್ರವಾರ ಗುಂಪು ಗುಂಪಾಗಿ ನಿಂತು ಚರ್ಚೆ ನಡೆಸಲಾಯಿತು.

ಪ್ರಮುಖ 3 ಪಕ್ಷಗಳ ಮುಖಂಡರ ಸಲಹೆ, ಸೂಚನೆಗಳನ್ನು ಪಡೆಯಲು ಆಕ್ಷಾಂಕ್ಷಿಗಳು ಪ್ರಮುಖರ ಬಳಿ ದೌಡಾಯಿಸಿದರು.

ಒಂದು ಪಕ್ಷದ ಬೆಂಬಲದಲ್ಲಿ ಜಯಗಳಿಸಿ ಮತ್ತೊಂದು ಪಕ್ಷದ ಕಡೆ ವಾಲುವವರನ್ನು ಹಿಡಿದಿಟ್ಟುಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪ್ರವಾಸ ಕರೆದೊಯ್ಯಲು ಶುಕ್ರವಾರವೇ ಸಿದ್ಧಗೊಳಿಸಲಾಗಿದೆ.

ತಾಲ್ಲೂಕಿನ ವಳ್ಳೂರು ಗ್ರಾಮ ಪಂಚಾಯಿತಿ ಸೇರಿದಂತೆ ಕೆಲ ಪಂಚಾಯಿತಿಗಳ ಸದಸ್ಯರು ಈಗಾಗಲೆ ಒಂದು ವಾರದಿಂದ ಪ್ರವಾಸದಲ್ಲಿದ್ದಾರೆ.

ತಮ್ಮ ಬೆಂಬಲಿಗರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಪಕ್ಷಗಳ ಪ್ರಮುಖರು ಕುಸ್ತಿ ಆರಂಭಿಸಿದ್ದಾರೆ. ತಮಿಳುನಾಡು, ಕೇರಳ, ಆಂಧ್ರದ ವಿಜಯವಾಡ, ಅಮರಾವತಿ, ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು, ದೇಗುಲಗಳಿಗೆ ಸದಸ್ಯರನ್ನು ಕರೆದೊಯ್ಯಲಾಗುತ್ತಿದೆ.

ಚುನಾವಣೆಯಲ್ಲಿ ಜನರ ಮತಗಳಿಸಿ ಗೆಲ್ಲುವುದು ಸುಲಭ. ಆದರೆ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಶೀಘ್ರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದರೆ ಒಳ್ಳೆಯದು. ಇಲ್ಲವಾದಲ್ಲಿ ಇಷ್ಟು ಮಂದಿಗೆ ಪ್ರವಾಸ, ಊಟ, ತಿಂಡಿ ಅವರು ಕೇಳಿದ್ದನ್ನು ಕೊಡಿಸುವುದು ತ್ರಾಸದಾಯಕ ಎಂದು ಆಕಾಂಕ್ಷಿಯೊಬ್ಬರು ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಸದಸ್ಯರ ಪ್ರವಾಸ ಭಾಗ್ಯದಿಂದ ಬಾಡಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. 10ರಿಂದ 12 ಮಂದಿಯನ್ನು ಪ್ರವಾಸ ಕರೆದೊಯ್ಯಲು ಟೆಂಪೊ ಟ್ರಾವೆಲರ್ ಸೂಕ್ತವಾಗಿರುವುದರಿಂದ ಮಧುಗಿರಿ, ಶಿರಾ, ಆಂಧ್ರದ ಮಡಕ ಶಿರಾ, ಹಿಂದೂಪುರ, ಅನಂತಪುರ ದಿಂದತರಿಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT