ಮಹಿಳಾ ಸಂಘದ ಸದಸ್ಯರ ನಡುವೆ ರಂಪಾಟ

7

ಮಹಿಳಾ ಸಂಘದ ಸದಸ್ಯರ ನಡುವೆ ರಂಪಾಟ

Published:
Updated:
Prajavani

ಗುಬ್ಬಿ: ಪಟ್ಟಣದ ಸ್ಟೆಲ್ಲಾ ಮೆರಿಸ್ ಶಾಲೆಯ ಹತ್ತಿರ ಹಣಕಾಸು ವಿಚಾರಕ್ಕೆ ಮಹಿಳೆಯರ ನಡುವೆ ಕಿತ್ತಾಟ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಘ ಸದಸ್ಯರ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿದೆ. ಒಬ್ಬ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಎಳೆದೊಯ್ಯುತ್ತಿದ್ದರೆ, ಇನ್ನೊಬ್ಬ ಮಹಿಳೆ ಕಾಲಲ್ಲಿ ಒದೆಯುತ್ತಿದ್ದಾರೆ. ಅವರ ಕಿತ್ತಾಟ- ಕೂಗಾಟಕ್ಕೆ ನಾಯಿಯೊಂದು ನೆಲದ ಮೇಲೆ ಒದ್ದಾಡುತ್ತಿದ್ದ ಮಹಿಳೆಯನ್ನು ಕಚ್ಚಲು ಮುಂದಾಗುತ್ತಿರುವ ಚಿತ್ರಣ ಇದೆ.

ಸ್ಟೆಲ್ಲಾ ಮೆರಿಸ್ ಶಾಲೆಯಲ್ಲಿ ಹೈಸ್ಕೂಲ್ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಘಟನೆಯನ್ನು ನಿಂತು ನೋಡುತ್ತಿದ್ದರೆ, ದಾರಿಹೋಕರು ಕ್ಷಣಕಾಲ ನಿಂತು ನೋಡಿ ‘ಈ ಉಸಾಬರಿ ನಮಗೇಕೆ?’ ಎಂದು ಕಾಲ್ಕಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !