ಬುಧವಾರ, ಜನವರಿ 29, 2020
27 °C

ಪಾಳು ಬಾವಿಗೆ ಬಿದ್ದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಮಂಚಿಹಳ್ಳಿ ಗ್ರಾಮದ ತಿಮ್ಮಣ್ಣ ಮತ್ತು ಸುರೇಶ್ ಅವರ ಅಡಿಕೆ ತೋಟದಲ್ಲಿರುವ ನೀರಿಲ್ಲದ ಬಾವಿಗೆ  3 ವರ್ಷದ ಹೆಣ್ಣು ಚಿರತೆ ಬಿದ್ದಿದೆ.

ಶನಿವಾರ ಮಧ್ಯಾಹ್ನ 1.30 ರ ವೇಳೆಯಲ್ಲಿ ತೋಟದ ಮಾಲೀಕರು ಬಾವಿಯಲ್ಲಿದ್ದ ಚಿರತೆ ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರವಳಿಕೆ ತಜ್ಞರ ತಂಡದ ಸಹಾಯದಿಂದ ಸಂಜೆ 5.30 ರ ವೇಳೆಗೆ ಚಿರತೆಯನ್ನು ಹೊರತೆಗೆಯಲಾಯಿತು.

ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಸಿ.ರವಿ, ನಟರಾಜ್, ಮಂಜುನಾಥ್, ಅರವಳಿಕೆ ತಜ್ಞ ಡಾ.ಮುರಳಿ ಮತ್ತು ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು