ಗುಬ್ಬಿ: ಕಲ್ಪತರು ನಾಡಿನ ಭಾಗವಾಗಿದ್ದ ಗುಬ್ಬಿ ತಾಲ್ಲೂಕಿನಲ್ಲಿ ನೀರಾವರಿ ಅನುಕೂಲ ಹೆಚ್ಚಾದಂತೆ ಅಡಿಕೆ ಬೆಳೆಯುವ ಪ್ರದೇಶವು ಹೆಚ್ಚಾಗುತ್ತಿದೆ. ತಾಲ್ಲೂಕಿನಲ್ಲಿ ವರ್ಷಕ್ಕೊಮ್ಮೆ ರೈತರಿಗೆ ಅನುಕೂಲವಾದಾಗ ಹಾಗೂ ಹೊಸದಾಗಿ ಹೊಂಬಾಳೆ ಬಿಟ್ಟಾಗ ಪೂಜೆ ಮಾಡಿ ನೈವೇದ್ಯ ಮಾಡುವ ಪದ್ಧತಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಬದಲಾದ ಸನ್ನಿವೇಶದಲ್ಲಿ ಅಡಿಕೆ ಹೊಂಬಾಳೆ ಹೊರಟಾಗಲೂ ವಿಶೇಷವಾಗಿ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಬಾಗಿನ ನೀಡುವ ಜೊತೆಗೆ ಊಟ ಹಾಕಿಸುವ ರೂಢಿಯನ್ನೂ ಮಾಡಿಕೊಂಡಿದ್ದಾರೆ.

ತೆಂಗು ಕಲ್ಪವೃಕ್ಷ ಎನ್ನುವ ಮಾತು ನೇಪಥ್ಯಕ್ಕೆ ಸರಿಯುತ್ತಿದ್ದು ಅಡಿಕೆಯನ್ನು ಲಕ್ಷ್ಮಿಯಂತೆ ಪೂಜಿಸುತ್ತಿರುವುದು ವಾಡಿಕೆಯಾಗುತ್ತಿದೆ. ಮೊದಲ ಬಾರಿಗೆ ಹೊಂಬಾಳೆ ಬಂದಾಗ ಮನೆಗೆ ಲಕ್ಷ್ಮಿ ಬಂದಂತೆ ಎಂಬಂತೆ ಆಗಿದೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಆಗುತ್ತಿರುವುದು ರೈತರನ್ನು ಉತ್ತೇಜಿಸಿದಂತಾಗುತ್ತಿದೆ.

ತಾಲ್ಲೂಕಿನಲ್ಲಿ ಪ್ರಸ್ತುತ ಸುಮಾರು 25 ಸಾವಿರ ಹೆಕ್ಟೇರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ರೈತರು ತೆಂಗು, ಮಾವು ಹಾಗೂ ಇತರ ಎಲ್ಲಾ ಬೆಳೆಗಳಿಗಿಂತಲೂ ಅಡಿಕೆಯನ್ನು ಹೆಚ್ಚು ಆರೈಕೆ ಮಾಡುತ್ತಿದ್ದಾರೆ.

ಅಡಿಕೆ ಧಾರಣೆ ಏರಿಕೆ ಆಗುತ್ತಿರುವುದು ನಮ್ಮನ್ನು ಅಡಿಕೆ ಬೆಳೆಯಲು ಉತ್ತೇಜಿಸುತ್ತಿದೆ. ಅಡಿಕೆ ಬೆಳೆಗೆ ಬಂದರೆ ಹಣಕಾಸಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿಯೇ ಅಡಿಕೆಯನ್ನು ಲಕ್ಷ್ಮಿಯಂತೆ ಪೂಜಿಸುವ ರೂಢಿ ಮಾಡಿಕೊಂಡಿದ್ದೇವೆ. ಬೆಳೆಗೆ ಬಂದ ನಂತರ ಪ್ರತಿ ವರ್ಷವೂ ಪೂಜೆ ಸಲ್ಲಿಸುತ್ತೇವೆ ಎನ್ನುತ್ತಾರೆ ರೈತ ಚಂದ್ರಶೇಖರ್.

ಪೂರ್ವಜರ ಕಾಲದಿಂದಲೂ ತೆಂಗಿಗೆ ಪೂಜನೀಯ ಸ್ಥಾನವನ್ನು ನೀಡುತ್ತಿದ್ದೆವು. ಅಡುಗೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ತೆಂಗನ್ನು ಬಳಸುತ್ತಿದ್ದ ಜೊತೆಗೆ ತೆಂಗಿನಿಂದಲೇ ಬದುಕು ಕಟ್ಟಿಕೊಂಡಿದ್ದೆವು. ಆದರೆ ಬದಲಾದ ಸನ್ನಿವೇಶದಲ್ಲಿ ಇತ್ತೀಚಿನ ಪೀಳಿಗೆಯವರು ಅಡಿಕೆ ಮರ ಪೂಜಿಸುವುದನ್ನು ರೂಢಿಸಿಕೊಂಡಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯ ಶಿವಣ್ಣ.

ತೆಂಗಿಗಿಂತಲೂ ಅಡಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತಿದೆ. ಆದ್ದರಿಂದ ಹೊಸದಾಗಿ ಬೆಳೆ ಬಂದ ಸಂದರ್ಭದಲ್ಲಿ ಅದನ್ನು ಪೂಜಿಸಿ, ನೈವೇದ್ಯ ಮಾಡಿ, ಊಟವನ್ನೂ ಹಾಕಿ ಬೇರೆಯವರ ಜೊತೆ ಖುಷಿ ಹಂಚಿಕೊಂಡರೆ ತಪ್ಪೇನಿದೆ. ಆದಾಯ ಇಲ್ಲವಾದಲ್ಲಿ ಕೃಷಿಯನ್ನು ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ರೈತ ಮಹಿಳೆ ಗಂಗಮ್ಮ.

ರೈತರು ಎಲ್ಲ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು. ಕೇವಲ ಅಡಿಕೆಯನ್ನೇ ನಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯದಲ್ಲಿ ಆರ್ಥಿಕ ಲಾಭವನ್ನು ಪಡೆಯಬಹುದಾದರೂ, ನೀರಾವರಿ ಅನುಕೂಲ ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ರೈತರು ಅಡಿಕೆ ಜತೆ ಬೇರೆ ಬೆಳೆಗಳನ್ನು ಬೆಳೆಯುವತ್ತ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಪ್ರಗತಿಪರ ರೈತ ಮಹೇಶ್ ತಿಳಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-17-1527948225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.