ಗುಬ್ಬಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಪರವಾನಗಿ ಭೂಮಾಪಕರು ಸುಮಾರು 2 ತಿಂಗಳಿನಿಂದ ಕೆಲಸ ತ್ಯಜಿಸಿ ಮುಷ್ಕರ ನಿರತರಾಗಿದ್ದಾರೆ. ಪರವಾನಗಿ ಭೂಮಾಪಕರ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಭೂ ದಾಖಲೆಗಾಗಿ ರೈತರ ಪರದಾಟ ಹೆಚ್ಚಾಗಿದೆ.

ತಾಲ್ಲೂಕಿನ ಭೂ ಮಾಪನ ಇಲಾಖೆಯಲ್ಲಿ 23 ಕಾಯಂ ಸರ್ಕಾರಿ ಭೂ ಮಾಪಕರು ಇದ್ದು 1 ಹುದ್ದೆ ಖಾಲಿ ಇದೆ. 45 ಪರವಾನಗಿ ಭೂಮಾಪಕರು ಇದ್ದಾರೆ. ಪರವಾನಗಿ ಹೊಂದಿರುವ ಭೂ ಮಾಪಕರ ಅನಿರ್ದಿಷ್ಟಾವಧಿ ಮುಷ್ಕರ ದಿಂದ ಕೇವಲ ಸರ್ಕಾರಿ ಭೂಮಾಪಕರು ಮಾತ್ರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದ್ದಾರೆ.

ತಾಲ್ಲೂಕಿನಲ್ಲಿ ಪ್ರಸ್ತುತ ಇರುವ ಸರ್ಕಾರಿ ಭೂಮಾಪಕರಲ್ಲಿಯೂ ಹಲವರು ನಿಯೋಜನೆ ಮೇರೆಗೆ ಜಿಲ್ಲಾ ಭೂ ದಾಖಲೆಗಳ ನಿರ್ದೇಶಕರ ಕಚೇರಿಯಲ್ಲಿ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ.

ತಾಲ್ಲೂಕಿನ 328 ಕಂದಾಯ ಗ್ರಾಮಗಳ ಪೈಕಿ ಹಕ್ಕು ಬದಲಾವಣೆ, ನಿವೇಶನ ಖರೀದಿ, ಜಮೀನು ಖರೀದಿ, ಹದ್ದುಬಸ್ತು, ನಕ್ಷೆ ತಯಾರಿ, ಪೋಡಿ ಮುಕ್ತ ಗ್ರಾಮ, 11 ಇ ಸ್ಕೆಚ್, ಕೋರ್ಟ್ ಆದೇಶ, ತತ್ಕಾಲ್ ಪೋಡಿ ಸೇರಿದಂತೆ ಸರ್ವೆಗೆ ಸೇರಿದ ಸುಮಾರು 4,666 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಮುಷ್ಕರನಿರತ ಭೂಮಾಪಕರ ಬೇಡಿಕೆ ತೀರ್ಮಾನವಾದರಷ್ಟೇ ರೈತರ ಅರ್ಜಿಗಳು ವಿಲೇವಾರಿ ಕಂಡು ಭೂಮಾಪನ ಇಲಾಖೆ ಮೇಲಿನ ಒತ್ತಡ ಕಡಿಮೆಯಾಗುವುದು. ಇಲ್ಲವಾದಲ್ಲಿ ಅರ್ಜಿಗಳು ದೂಳು ಹಿಡಿದು ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಲಿದೆ.

ಭೂಮಾಪಕರ ಮುಷ್ಕರಕ್ಕಿಂತಲೂ ಮೊದಲೇ ಭೂಮಾಪನ ಇಲಾಖೆಯಲ್ಲಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿದ್ದವು. ಇದೀಗ ಪರವಾನಗಿ ಭೂ ಮಾಪಕರು ಮುಷ್ಕರನಿರತರಾಗಿದ್ದಾರೆ ಎಂಬುದನ್ನೇ ನೆಪ ಮಾಡಿಕೊಂಡು ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ. ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಕಚೇರಿಗೆ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದರೂ ಸರ್ವೆಕಾರ್ಯ ಆಗುತ್ತಿಲ್ಲ. ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಏನು ಮಾಡುವುದು ಒಂದು ತಿಳಿಯದಾಗಿದೆ ಎಂದು ರೈತ ದೊಡ್ಡಯ್ಯ ಬೇಸರ ವ್ಯಕ್ತಪಡಿಸಿದರು.

ಸಂಕಷ್ಟಕ್ಕೆ ಸಿಲುಕಿದ್ದೇವೆ: ಸರ್ಕಾರಿ ಭೂಮಾಪಕರು ಮಾಡುವ ಎಲ್ಲ ಕೆಲಸಗಳನ್ನು ಪರವಾನಗಿ ಹೊಂದಿರುವ ಭೂಮಾಪಕರು ಮಾಡುತ್ತೇವೆ. ಇದರ ಜೊತೆಗೆ ಇತ್ತೀಚೆಗೆ ಪೋಡಿ ಮುಕ್ತ ಗ್ರಾಮ, ಕಂದಾಯ ಗ್ರಾಮ ಹಾಗೂ ದುರಸ್ತಿ ಕೆಲಸಗಳನ್ನು ನಮಗೆ ಹಂಚಲಾಗುತ್ತಿದೆ. ಈ ಕಾರ್ಯಕ್ಕಾಗಿ ನೀಡುತ್ತಿರುವ ಗೌರವಧನ ತುಂಬಾ ಕಡಿಮೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸುತ್ತೇವೆ. ಸರ್ಕಾರ ಪರವಾನಗಿ ಭೂಮಾಪಕರ ಸಮಸ್ಯೆ ಬಗೆಹರಿಸಿಕೊಟ್ಟಲ್ಲಿ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡುತ್ತೇವೆ ಎಂದು ಮುಷ್ಕರನಿರತ ಪರವಾನಗಿ ಭೂಮಾಪಕರು ತಿಳಿಸಿದರು.

ಭೂ ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದೇವೆ:ಸರ್ಕಾರಿ ಭೂಮಾಪಕರು ಮಾಡುವ ಎಲ್ಲ ಕೆಲಸಗಳನ್ನು ಪರವಾನಗಿ ಹೊಂದಿರುವ ಭೂಮಾಪಕರು ಮಾಡುತ್ತೇವೆ. ಇದರ ಜೊತೆಗೆ ಇತ್ತೀಚೆಗೆ ಪೋಡಿ ಮುಕ್ತ ಗ್ರಾಮ, ಕಂದಾಯ ಗ್ರಾಮ ಹಾಗೂ ದುರಸ್ತಿ ಕೆಲಸಗಳನ್ನು ನಮಗೆ ಹಂಚಲಾಗುತ್ತಿದೆ. ಈ ಕಾರ್ಯಕ್ಕಾಗಿ ನೀಡುತ್ತಿರುವ ಗೌರವಧನ ತುಂಬಾ ಕಡಿಮೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸುತ್ತೇವೆ. ಸರ್ಕಾರ ಪರವಾನಗಿ ಭೂಮಾಪಕರ ಸಮಸ್ಯೆ ಬಗೆಹರಿಸಿಕೊಟ್ಟಲ್ಲಿ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡುತ್ತೇವೆ ಎಂದು ಮುಷ್ಕರನಿರತ ಪರವಾನಗಿ ಭೂಮಾಪಕರು ತಿಳಿಸಿದರು.

ಸಿ.ಕೆ ರವೀಂದ್ರ, ವಕೀಲ

ಪ್ರತಿಭಟನೆ ಎಚ್ಚರಿಕೆ: ಪರವಾನಗಿ ಭೂಮಾಪಕರು ಸುಮಾರು 2 ತಿಂಗಳಿನಿಂದಲೂ ಕೆಲಸ ತ್ಯಜಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಯಾವುದೇ ಪರಿಹಾರಕ್ಕೆ ಮುಂದಾಗಿಲ್ಲ. ಇದರಿಂದ ಸರ್ವೆ ಕೆಲಸ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ರೈತರ ಹಿತವೇ ನಮಗೆ ಮುಖ್ಯ.

ಸಿ.ಜಿ.ಲೋಕೇಶ್, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ

ತೊಂದರೆಯಾಗದಂತೆ ಕ್ರಮವಹಿಸಿ: ಪರವಾನಗಿ ಭೂಮಾಪಕರ ಮುಷ್ಕರ ಕೇವಲ ಇಲಾಖೆಗಷ್ಟೇ ಸೀಮಿತವಾಗಿಲ್ಲ. ರೈತರಿಗೆ ನೇರವಾಗಿ ಸಂಬಂಧಪಟ್ಟಿರುವುದರಿಂದ ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ರೈತರ ಪರವಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ.

ಜಮೀನು ಮಾರಾಟ ಮಾಡಬೇಕಿದೆ: ಮನೆಯಲ್ಲಿ ಗಂಡನ ಆರೋಗ್ಯಕ್ಕಾಗಿ ಸಾಕಷ್ಟು ಹಣ ವ್ಯಯಮಾಡಿದ್ದೆವು. ಇದೀಗ ಮಗಳ ಮದುವೆಯನ್ನು ಮಾಡಬೇಕಾಗಿದೆ. ಜಮೀನಿನ ದಾಖಲೆ ಸರಿಪಡಿಸಿ ಬ್ಯಾಂಕ್ನಲ್ಲಿ ಸಾಲ ಇಲ್ಲವೇ ಮಾರಾಟ ಮಾಡಲೇಬೇಕಿದೆ. ಇಲ್ಲವಾದಲ್ಲಿ ನಮಗೆ ಹಣ ಹೊಂದಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕುತ್ತೇವೆ. ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಏನು ಮಾಡುವುದು ಒಂದು ತಿಳಿಯದಾಗಿದೆ.

ಲಕ್ಷ್ಮಮ್ಮ, ರೈತ ಮಹಿಳೆ

ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುತ್ತೇವೆ: ಪರವಾನಗಿ ಖಾಸಗಿ ಭೂಮಾಪಕರ ಮುಷ್ಕರದಿಂದ ತಾಲ್ಲೂಕಿನಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೇಲಧಿಕಾರಿಗಳು ಸ್ಪಂದಿಸಿ ನಿಯೋಜನೆ ಮೇಲೆ ಇರುವ ಸಿಬ್ಬಂದಿಯನ್ನು ಮಾತೃ ಕಚೇರಿಗೆ ಕಳುಹಿಸಿ ಸರ್ವೆ ಕಾರ್ಯದಲ್ಲಿ ಭಾಗಿಯಾಗುವಂತೆ ತಿಳಿಸಲು ಆದೇಶಿಸಿದ್ದಾರೆ. ಪ್ರಸ್ತುತ ತಾಲ್ಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಭೂಮಾಪಕರನ್ನೇ ಬಳಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುತ್ತೇವೆ.

ತಿಮ್ಮಯ್ಯ, ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.