ಗುಬ್ಬಿ: ಅಹಿಂಸೆ ಮತ್ತು ಶಾಂತಿಯ ಪಥದಲ್ಲಿ ಸಾಗಿದಲ್ಲಿ ಸಾಮರಸ್ಯದ ಸಮಾಜ ಕಟ್ಟಲು ಸಾಧ್ಯ ಎನ್ನುವುದನ್ನು ಭಗವಾನ್ ಮಹಾವೀರರು ತೋರಿಸಿ ಕೊಟ್ಟಿದ್ದಾರೆ ಎಂದು ತಹಶೀಲ್ದಾರ್ ಆರತಿ ಬಿ ಹೇಳಿದರು.

ಸೋಮವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಮಹಾವೀರ ಜಯಂತಿಯಲ್ಲಿ ಮಾತನಾಡಿದರು.

ಮಹಾವೀರರು ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ನಿರಂತರ ಪ್ರಯತ್ನ ನಡೆಸಿದರು. ಅವರ ತತ್ವ, ಆದರ್ಶ, ಸಿದ್ಧಾಂತಗಳು ಇಂದಿನ ಸಮಾಜಕ್ಕೆ ದಾರಿ ದೀಪ. ಮಹಾವೀರರು ತೋರಿಸಿರುವ ಮಾರ್ಗದಲ್ಲಿ ನಡೆದಲ್ಲಿ ಪ್ರಪಂಚದಲ್ಲಿ ಯುದ್ಧದ ಸನ್ನಿವೇಶವೇ ಉದ್ಭವವಾಗುವುದಿಲ್ಲ ಎಂದರು.

ಬದುಕಿ ಮತ್ತು ಬದುಕಲು ಬಿಡಿ ಎಂಬ ತತ್ವವನ್ನು ಮನುಕುಲಕ್ಕೆ ತಿಳಿಸುವ ಮೂಲಕ ವಿಶ್ವ ಮಾನವೀಯತೆಯ ಸಂದೇಶವನ್ನು ಇಡಿ ಜಗತ್ತಿಗೆ ತಿಳಿಸಿದ ಮಹಾನ್ ತೀರ್ಥಂಕರರಾಗಿದ್ದಾರೆ. ಅವರ ಅಹಿಂಸಾ ಮಾರ್ಗದಲ್ಲಿ ಸಾಗಿ ಅಸೂಯೆ ಮುಕ್ತ ಸಮಾಜ ಕಟ್ಟೋಣ ಎಂದರು.

ಸಮುದಾಯದ ಸಾಧಕರನ್ನು ಗೌರವಿಸಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ, ಇಸಿಒ ನಿಜಾನಂದ ಮೂರ್ತಿ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-17-631896881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.