ಗುಬ್ಬಿ: ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದೆ, ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ದೊಡ್ಡ ಹೊಡೆತ ನೀಡಿದೆ.

ಕಳೆದ ಸೋಮವಾರ ಸಂಜೆ ಸುರಿದ ಹದಮಳೆ ತೋಟಗಾರಿಕೆ ಬೆಳೆ ಉಳಿಸಿಕೊಳ್ಳುವ ಹಾಗೂ ರಾಗಿ ಬಿತ್ತನೆಗೆ ಅನುಕೂಲವಾದರೂ ಈ ಮಳೆ ಸಾಕಾಗಿಲ್ಲ.

ತಾಲ್ಲೂಕಿನಲ್ಲಿ ಹೇಮಾವತಿ ನೀರಿನಿಂದ ಬಹುತೇಕ ಕೆರೆಗಳನ್ನು ತುಂಬಿಸಲಾಗಿದೆ. ಆದರೂ ಪಟ್ಟಣಕ್ಕೆ ನೀರು ಒದಗಿಸುವ ಹೇರೂರು ಕೆರೆ ಹೊರತುಪಡಿಸಿ ತಾಲ್ಲೂಕಿನ ಯಾವ ಕೆರೆಗಳಿಂದಲೂ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸಿಲ್ಲ. ನಿಟ್ಟೂರು, ಸಿ.ಎಸ್. ಪುರ, ಕಡಬ ಕೆರೆಗಳಲ್ಲಿ ಕುಡಿಯುವ ನೀರಿಗೆ ಯೋಜನೆ ರೂಪಿಸಿದ್ದರೂ ಕಾರ್ಯಗತವಾಗಿಲ್ಲದಿರುವುದು ನೀರಿನ ಬವಣೆ ಹೆಚ್ಚಲು ಕಾರಣವಾಗಿದೆ ಎನ್ನುವುದು ಜನರ ದೂರು.

ತಾಲ್ಲೂಕಿನ ಹಾಗಲವಾಡಿ, ಮಠ, ಗಂಗಯ್ಯನ ಪಾಳ್ಯ ಕೆರೆಗಳಲ್ಲಿ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲಾಗಿದ್ದು ಪ್ರಗತಿಯಲ್ಲಿವೆ. ಪ್ರಮುಖ ಏತ ನೀರಾವರಿ ಯೋಜನೆ ಬಿಕ್ಕೇಗುಡ್ಡ ಕಾಮಗಾರಿ ಮುಗಿಯದೆ ಆ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಇತ್ತೀಚಿಗೆ ಕುಡಿಯುವ ನೀರಿಗಾಗಿ ಕೆಲವು ಗ್ರಾಮಗಳಲ್ಲಿ ತೊಂದರೆಯಾಗಿದ್ದು ಕೊಳವೆ ಬಾವಿಗಳನ್ನು ಕೊರಸಿದರೂ ಪ್ರಯೋಜನವಾಗಿಲ್ಲ

ನಿಟ್ಟೂರು ಹೋಬಳಿ ಹೊನ್ನೇನಹಳ್ಳಿ, ಹಾಗಲವಾಡಿ, ಮಾದಾಪುರ, ದಾದುಬಾಯ್ ಪಾಳ್ಯ, ಕಂಬಯ್ಯನ ಪಾಳ್ಯ, ಸಿ.ಯಡವನಹಳ್ಳಿ ಮೊದಲಾದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜಲಜೀವನ್ ಮಿಷನ್ ಕಾಮಗಾರಿಯೂ ಪೂರ್ಣಗೊಂಡಿಲ್ಲ.

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 975 ಕೊಳವೆ ಬಾವಿಗಳಿವೆ. ಅವುಗಳಲ್ಲಿ 12ರಲ್ಲಿ ನೀರು ಬರದಂತಾಗಿವೆ. 173 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು ಅವುಗಳಲ್ಲಿ 32 ಕಾರ್ಯನಿರ್ವಹಿಸುತ್ತಿಲ್ಲ.

ಪಟ್ಟಣಕ್ಕೆ ನೀರು ಒದಗಿಸುವ ಹೇರೂರು ಕೆರೆಯಲ್ಲಿ ಸ್ವಲ್ಪಮಟ್ಟಿಗೆ ನೀರು ಇದ್ದು, ಸದ್ಯ ಹೇಮಾವತಿ ನಾಲೆ ನೀರು ಹರಿಸಲಾಗುತ್ತಿದೆ. ಪಟ್ಟಣದಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ. ಕೆರೆಯ ನೀರಿನ ಜೊತೆಗೆ ಪಟ್ಟಣದಲ್ಲಿರುವ 40ಕ್ಕೂ ಹೆಚ್ಚು ಕೊಳವೆ ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುವುದು. ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ವ್ಯವಸ್ಥಿತವಾಗಿ ನೀರು ಒದಗಿಸಬೇಕು ಎಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.

ಪೂರ್ವ ಮುಂಗಾರು ಮಳೆ ಬರದಿದ್ದರೆ ಕೆರೆಗಳಲ್ಲಿರುವ ಅಲ್ಪಸಲ್ಪ ನೀರೂ ಬರಿದಾಗುವುದು. ಕೆರೆ, ಕಟ್ಟೆಗಳಲ್ಲಿ ನೀರು ಇಲ್ಲವಾದಲ್ಲಿ ತೋಟಗಳು ಹಾಗೂ ದನ, ಕರುಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮತ್ತೆ ಮಳೆ ಬಾರದೆ ಹೋದಲ್ಲಿ ತಾಲ್ಲೂಕು ಬರದ ಸಂಕಷ್ಟಕ್ಕೆ ಸಿಲುಕುವುದು. ಹೇಮಾವತಿ ನೀರನ್ನು ನಂಬಿಕೊಂಡ ರೈತರು ಅಡಿಕೆ ಬೆಳೆಯಲು ಮುಂದಾಗಿರುವುದು ನೀರಿನ ಬವಣೆ ಹೆಚ್ಚಾಗಲು ಕಾರಣವಾಗುತ್ತಿದೆ. ಇರುವ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಕೊಳವೆಬಾವಿ ಕೊರೆಸುವುದು ಅನಿವಾರ್ಯ. ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ನಿರಂತರವಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಅಂತರ್ಜಲ ದಿನದಿಂದ ದಿನಕ್ಕೆ ತಗ್ಗುತ್ತಿದ್ದು ಇರುವ ಕೊಳವೆ ಬಾವಿಗಳಲ್ಲಿಯೇ ನೀರು ಕಡಿಮೆಯಾಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ಒಂದು ತಿಂಗಳಿನಿಂದ ಈಚೆಗೆ ಕೊಳವೆ ಬಾವಿಗಳನ್ನು ಕೊರೆಸುವುದು ಹೆಚ್ಚಾಗುತ್ತಿದೆ. ಕಸಬ ಹೋಬಳಿಯಲ್ಲಿಯೇ ಒಂದು ತಿಂಗಳಿನಿಂದ ಈಚೆಗೆ 35ಕ್ಕೂ ಹೆಚ್ಚು ಬೋರ್ವೆಲ್ ಕೊರೆಸಲಾಗಿದೆ. ಬೋರ್ವೆಲ್ ಲಾರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂಗಡ ಬುಕಿಂಗ್ ಮಾಡುತ್ತಿದ್ದಾರೆ.

‘ಮಳೆ ಬರದೇ ಹೋದಲ್ಲಿ ಈಗಿರುವ ಕೊಳವೆ ಬಾವಿಗಳ ಜೊತೆ ಅಗತ್ಯವಿರುವ ಕಡೆ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಸಲು ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಪಟ್ಟಣದ ನೀರಿನ ಬವಣೆಯನ್ನು ನಿರಂತರವಾಗಿ ಶಾಸಕರ ಗಮನಕ್ಕೆ ತರಲಾಗುತ್ತಿದೆ. ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-17-1606962014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.