ಗುಬ್ಬಿ: ತಾಲ್ಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇತ್ತೀಚೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದ್ದರೂ ತಾಪಮಾನ ಕಡಿಮೆಯಾಗಿಲ್ಲ.

ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದ ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡಲು ಸಾಧ್ಯವಾಗುತ್ತಿಲ್ಲ. ಪೋಷಕರು ಮಕ್ಕಳಿಗೆ ಮನೆಯ ವರಾಂಡದಲ್ಲಿಯೇ ಅಕ್ಕ, ಪಕ್ಕದ ಮನೆಯ ಮಕ್ಕಳನ್ನು ಸೇರಿಸಿ ಆಟವಾಡುವಂತೆ ಹೇಳುತ್ತಿದ್ದಾರೆ. ಪೋಷಕರ ಒತ್ತಡದಿಂದ ಮಕ್ಕಳು ಮನೆಯ ಮುಂದಿನ ವರಾಂಡದ ನೆರಳಿನಲ್ಲಿಯೇ ಆಟವಾಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ.

ಬಿಸಿಲಿನ ತಾಪ ಕಡಿಮೆ ಇದ್ದಾಗ ಮಕ್ಕಳನ್ನು ತೋಟಗಳಿಗೆ ಕರೆದುಕೊಂಡು ಹೋಗುವ ಜೊತೆಗೆ ಮನೆಯ ಮುಂದೆ ಆಟ ಆಡಿಕೊಳ್ಳಲು ಬಿಡುತ್ತಿದ್ದೆವು. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲು ಹಾಗೂ ಆಟವಾಡಲು ಬಿಡಲು ಭಯವಾಗುತ್ತಿದೆ ಎನ್ನುತ್ತಾರೆ ಪೋಷಕಿ ಷಣ್ಮುಖಮ್ಮ.

‘ತುಮಕೂರಿನಲ್ಲಿ ಶಾಲೆಗೆ ಹೋಗುತ್ತಿದ್ದ ನಾನು ರಜಾ ದಿನ ಕಳೆಯಲು ಹಳ್ಳಿಯ ತಾತ, ಅಜ್ಜಿಯ ಮನೆಗೆ ಬಂದಿದ್ದೆ. ಆದರೆ ಬಿಸಿಲು ಹೆಚ್ಚಾಗಿರುವುದರಿಂದ ಮನೆಯವರು ಹೊರಗಡೆ ಆಟ ಆಡಲು ಬಿಡುತ್ತಿಲ್ಲ’ ಎನ್ನುತ್ತಾನೆ ಬಾಲಕ ರುತ್ವಿಕ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-17-1749375873

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.