ಗುಬ್ಬಿ: ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ವರ್ತುಲ ರಸ್ತೆ ಪ್ರಾರಂಭಗೊಳ್ಳುವ ಎಂ.ಎಚ್. ಪಟ್ಟಣ ಗೇಟ್ನಿಂದ ಪಟ್ಟಣದ ಮೂಲಕ ವರ್ತುಲ ರಸ್ತೆ ಸೇರುವ ಎನ್. ಮತ್ತಿಘಟ್ಟದವರೆಗಿನ 8.5 ಕಿ.ಮೀ. ಹಳೆ ರಾಷ್ಟ್ರೀಯ ಹೆದ್ದಾರಿ ವೈಟ್ಟಾಪಿಂಗ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.

₹28 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅನೇಕ ತಿಂಗಳು ಕಳೆದಿದ್ದರೂ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕಾಮಗಾರಿಯನ್ನು ಮೂಲ ಯೋಜನೆಗೆ ಅನುಸಾರ ಮಾಡದೆ ರಸ್ತೆ ಮಧ್ಯೆ ಜಾಗ ಬಿಟ್ಟು ಕಾಮಗಾರಿ ಮುಂದುವರಿಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದಿದೆ. ಕಾಮಗಾರಿ ಪ್ರಾರಂಭವಾದಾಗಿ ನಿಂದ ಏಕಮುಖ ಸಂಚಾರ ಅನಿವಾರ್ಯವಾಗಿದೆ. ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

ಪಟ್ಟಣದ ವ್ಯಾಪ್ತಿಯಲ್ಲಾದರೂ ಕಾಮಗಾರಿ ತ್ವರಿತವಾಗಿ ಮುಗಿಯುವುದು ಎಂಬ ನಿರೀಕ್ಷೆಯಲ್ಲಿದ್ದ ಜನ ನಿಧಾನ ಗತಿಯ ಕಾಮಗಾರಿಗೆ ಬೇಸತ್ತು ಹೋಗಿದ್ದಾರೆ. ಎಂ.ಎಚ್. ಪಟ್ಟಣ ಗೇಟ್ನಿಂದ ಸಿಐಟಿ ಕಾಲೇಜುವರೆಗೆ ಇರುವ ಯಾವುದೇ ಸೇತುವೆಯ ವಿಸ್ತೀರ್ಣ ವನ್ನು ಅಗಲಗೊಳಿಸದೆ ರಸ್ತೆ ನಿರ್ಮಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ರಸ್ತೆ ನಿರ್ಮಾಣವಾಗಿರುವ ಕಡೆ ಕ್ಯೂರಿಂಗ್ಗಾಗಿ ಅಡಿಕೆ ಸಿಪ್ಪೆ ಹಾಕಿ ನೀರು ಬಿಡುತ್ತಿರುವುದರಿಂದ ದುರ್ವಾಸನೆ ಜೊತೆಗೆ ಒಣಗಿದ ನಂತರ ದೂಳು ಹೆಚ್ಚಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ತಾಲ್ಲೂಕು ಆಸ್ಪತ್ರೆ ಮುಂಭಾಗ ಹೆದ್ದಾರಿ ಹಾದು ಹೋಗಿರುವುದರಿಂದ ರಸ್ತೆಯ ದೂಳು ಗಾಳಿಗೆ ಹಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೂ ಸಂಕಷ್ಟ ಉಂಟು ಮಾಡಿದೆ. ರಸ್ತೆ ಕಾಮಗಾರಿ ಮುಗಿದ ತಕ್ಷಣ ಅಗತ್ಯವಿರುವ ಕಡೆ ಹೆದ್ದಾರಿಯಿಂದ ವಾಹನಗಳು ಇಳಿಯಲು ಮತ್ತು ಹತ್ತಲು ಕಾಂಕ್ರೀಟ್ ಹಾಕಿ ಅನುಕೂಲ ಮಾಡಿಕೊಡಬೇಕಿತ್ತು. ಆದರೆ ಅಂತಹ ಯಾವುದೇ ಕ್ರಮಗಳನ್ನು ಸಂಬಂಧಿಸಿದವರು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೈಟ್ಟಾಪಿಂಗ್ ಕಾಮಗಾರಿ ನೆಪ ಮಾಡಿಕೊಂಡ ಹೆದ್ದಾರಿ ಬದಿಯ ಜಮೀನಿನ ಹಲವರು ಅವರಿಗೆ ಅನುಕೂಲವಾಗುವಂತೆ ಮರಗಳನ್ನು ತೆರವುಗೊಳಿಸಿ ಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್ಟಾಪಿಂಗ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ನಾಲ್ಕು ಪಥದ ರಸ್ತೆ ಮಾಡಲಾಗುವುದು ಎಂದು ಹೇಳುವ ಅಧಿಕಾರಿಗಳು ರಸ್ತೆಯ ಎರಡೂ ಬದಿಗಳಲ್ಲಿ ಅಗತ್ಯವಿರುವ ಚರಂಡಿಗಳನ್ನು ನಿರ್ಮಿಸದೆ ಕಾಮಗಾರಿ ಮಾಡುತ್ತಿರುವುದು ಜನರ ಅಸಮಾಧಾನ ಹೆಚ್ಚಿಸಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಒತ್ತುವರಿಯಾಗಿರುವ ಪಾದಚಾರಿ ರಸ್ತೆ ಹಾಗೂ ಚರಂಡಿಗಳನ್ನು ತೆರವುಗೊಳಿಸಿ ನಂತರ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೆಲವು ಪ್ರಭಾವಿಗಳ ಹಿತ ಕಾಪಾಡಲು ಮುಂದಾಗಿರುವಂತೆ ಕಂಡುಬರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಯಮಾನುಸಾರ ಕ್ರಮ ಕೈಗೊಂಡು ಕಾಮಗಾರಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-17-1711737334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.